ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಯಾರಿಗೂ ಯಾವ್ದಕ್ಕೂ ಹೆದರಬಾರ್ದು ಮುಂದೆ ನಡೀ ಕಂದಾ… ಮರಿಯಾನೆಗೆ ತಾಯಿ ನಡೆಯಲು ಕಲಿಸುವ ದೃಶ್ಯ ಸೆರೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಆನೆಗಳ ಹಾವಳಿ ಮತ್ತಷ್ಟು ಮಿತಿಮೀರಿದ್ದು ಆನೆಗಳು ನಡೆದಿದ್ದೇ ದಾರಿ ಎನ್ನುವಂತಾಗಿದೆ. ತಾಲೂಕಿನ ಮಾರಿಕಟ್ಟೆ ಗ್ರಾಮದಲ್ಲಿ ಬೀಟಮ್ಮ ತಂಡದ ಆನೆಯೊಂದು ನಾಲ್ಕು ದಿನದ ಹಿಂದೆ ಮರಿಗೆ ಜನ್ಮ ನೀಡಿದ್ದು ತಾಯಿ ಆನೆ ಸೊಂಡಿಲಿನಲ್ಲಿ ತಳ್ಳಿ ಮರಿಯಾನೆಗೆ ನಡೆಯಲು ಕಲಿಸಿ ಹೊಸ ಪ್ರಪಂಚ ತೋರಿಸುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳೆದ ನಾಲ್ಕು ದಿನದ ಹಿಂದೆ ಗುಂಪಿನ ಆನೆಯೊಂದು ಮರಿ ಹಾಕಿರುವ ಕಾರಣ ಮಾರಿಕಟ್ಟೆ ಗ್ರಾಮದ ಅರಣ್ಯ ಪ್ರದೇಶದಲ್ಲೇ ಮೊಕ್ಕಾಂ ಹೂಡಿರುವ ಆನೆಗಳ ಹಿಂಡು ರಾತ್ರಿ ವೇಳೆ ಕಾಫಿ ತೋಟಗಳಿಗೆ ಆಹಾರ ಅರಸಿ ಎಲ್ಲೆಂದರಲ್ಲಿ ನುಗ್ಗಿ ದಾಳಿ ಮಾಡಿ ಬಾಳೆ, ಕಾಫಿ, ಮೆಣಸು, ಸೇರಿದಂತೆ ಇನ್ನಿತರ ಬೆಳೆಗಳನ್ನು ಸರ್ವನಾಶ ಮಾಡುತ್ತಿವೆ ಬೀಟಮ್ಮ ಗ್ಯಾಂಗ್ ಆನೆಗಳು. ರಾತ್ರಿಯಿಡೀ ಆಹಾರಕ್ಕಾಗಿ ಕಾಫಿ ತೋಟಗಳಿಗೆ ನುಗ್ಗುವ 22 ಆನೆಗಳ ತಂಡ ಬೆಳಗಾಗುವುದರೊಳಗೆ ಅದೇ ತೋಟದಲ್ಲಿ ಬೀಡು ಬಿಟ್ಟು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

Edited By : Manjunath H D
PublicNext

PublicNext

22/11/2024 12:36 pm

Cinque Terre

20.55 K

Cinque Terre

0

ಸಂಬಂಧಿತ ಸುದ್ದಿ