ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಜಯಭೇರಿ ಬಾರಿಸಿದ್ದಾರೆ. ಪಠಾಣ್ ಜಯಕ್ಕಾಗಿ ನಾಮಪತ್ರ ವಾಪಸ್ ಪಡೆದು ಪಕ್ಷಕ್ಕಾಗಿ ದುಡಿದ ಅಜ್ಜಂಫೀರ್ ಖಾದ್ರಿಯವರು ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಅಜ್ಜಂಫೀರ್ ಖಾದ್ರಿಯವರು ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿರುವ ವೀಡಿಯೊ ವೈರಲ್ ಆಗಿದೆ. ಅಜ್ಜಂಫೀರ್ ಖಾದ್ರಿ ಕರೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯನವರು ಖಾದ್ರಿಗೆ ಶುಭಾಶಯ ಹೇಳಿದ್ದಾರೆ.
ಮತ ಎಣಿಕೆ ಮುಗಿಯಿತು ಸರ್. 13,000 ಮತಗಳ ಲೀಡ್ ನಿಂದ ಪಠಾಣ್ ಗೆದ್ದಿದ್ದಾರೆ ಎಂದು ಖಾದ್ರಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯನವರು, ಖಾದ್ರಿ ನೀನು ಶ್ರಮ ಪಟ್ಟಿದ್ದು ಸಾರ್ಥಕವಾಯಿತು ಎಂದು ಹೇಳಿದ್ದಾರೆ. ನಂತರ ಮಾತನಾಡಿದ ಅಜ್ಜಂಫೀರ್ ಖಾದ್ರಿ, ನಿಮಗಾಗಿ ಸರ್, ನಮ್ಮ ತಾಯಿಗಾಗಿ ತ್ಯಾಗ ಮಾಡಿದ್ದೇನೆ ಸರ್ ಎಂದು ಭಾವುಕರಾಗಿ ನುಡಿದಿದ್ದಾರೆ.
ನಿಮಗಾಗಿ ತ್ಯಾಗ ಮಾಡಿದ್ದೇನೆ ಸರ್. ನೀವು ಸದಾ ನಗುತ್ತಾ ಇರಬೇಕು. ಅಷ್ಟು ಸಾಕು, ಸರ್ ನನಗೆ ಎಂದು ಖಾದ್ರಿ ಹೇಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ನಕ್ಕು ಬಿಟ್ಟಿದ್ದಾರೆ. ನಿನಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
PublicNext
23/11/2024 08:46 pm