ಹಾವೇರಿ: ಶಿಗ್ಗಾವಿ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಮತ ಎಣಿಕೆಗೆ ಕೇಂದ್ರದ ಒಳಗೆ ಹೋಗಲು ಮತಯಂತ್ರಗಳು ಸಿದ್ದರಾಗಿವೆ. ಹಾವೇರಿ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಆಗಮಿಸಿದ್ದಾರೆ. ದೇವಗಿರಿ ಇಂಜಿನಿಯರಿಂಗ್ ಕಾಲೇಜಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಶೀಗ್ಗಾವಿ ವಿಧಾನಸಭಾ ಕ್ಷೇತ್ರದ ಸಂಕ್ಷಿಪ್ತ ಮಾಹಿತಿ ಹೀಗಿದೆ.
ಶಿಗ್ಗಾವಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 2,37,525
ಮತ ಚಲಾಯಿಸಿದ ಮತದಾರರ ಸಂಖ್ಯೆ- 1,91,728
ಮತ ಚಲಾಯಿಸಿದ ಪುರುಷ ಮತದಾರರು- 99,241
ಮತ ಚಲಾಯಿಸಿದ ಮಹಿಳಾ ಮತದಾರರು- 92,485
ಮತದಾನದ ಪ್ರಮಾಣ- 80.72%
ಇನ್ನು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಇವಿಎಂ ಮತಗಳ ಎಣಿಕೆಗಾಗಿ ಒಟ್ಟು 14 ಟೇಬಲ್ ನಿಗದಿಪಡಿಸಲಾಗಿದೆ. 1 ಟೇಬಲ್‌ನಲ್ಲಿ ಅಂಚೆ ಮತ, ಸೇವಾ ಮತದಾರರ ಅಂಚೆ ಮತ ಎಣಿಕೆ ನಡೆಯಲಿದೆ.
ಪ್ರತಿ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಇರಲಿದ್ದಾರೆ. ಒಬ್ಬರು ಎಣಿಕೆ ಮೈಕ್ರೋ ಅಬ್ಸರ್‌ವರ್ ನೇಮಿಸಲಾಗಿದೆ.
ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಕೆಳಕಂಡಂತೆ ಭದ್ರತೆ ನಿಯೋಜಿಲಸಾಗಿದೆ.
ಡಿ.ಎಸ್.ಪಿ-4, ಸಿ.ಪಿ.ಐ-9, ಪಿ.ಎಸ್.ಐ-25,
ಎ.ಎಸ್.ಐ-29, ಹೆಚ್.ಸಿ/ಪಿ.ಸಿ-250
ಕೆ.ಎಸ್.ಆರ್.ಪಿ.ಯ 2 ತುಕಡಿಗಳ ನಿಯೋಜನೆ
ಡಿ.ಆರ್. 4 ತುಕಡಿಗಳೊಂದಿಗೆ ಏಣಿಕೆ ಕೇಂದ್ರದ ಸುತ್ತ ಪೊಲೀಸ್ ಸರ್ಪಗಾವಲು
ಏಜೆಂಟರುಗಳಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ಕಡ್ಡಾಯ
ಎಣಿಕೆ ಕೇಂದ್ರದ ಸುತ್ತ ಮುತ್ತ 200 ಮೀ ವ್ಯಾಪ್ತಿಯಲ್ಲಿ ಬಿ.ಎನ್.ಎಸ್.ಎಸ್ 163 ನಿಷೇದಾಜ್ಞೆ ಜಾರಿ
ಚುನಾವಣಾ ಏಜೆಂಟರುಗಳಿಗೆ ಪೆನ್ ಮತ್ತು ಹಾಳೆಗಳನ್ನು ಮಾತ್ರ ತರಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಕತ್ತರಿ/ ಚಾಕು ಅಥವಾ ಇನ್ನಿತರೆ ಹರಿತವಾದ ವಸ್ತಗಳು ಹಾಗೂ ಲೈಟರ್, ಬೆಂಕಿ ಪೊಟ್ಟಣ, ಗುಟ್ಕಾ, ತಂಬಾಕು, ಸೀಗರೇಟ್ ಹಾಗೂ ಸ್ಪೋಟಕ ಸಾಮಗ್ರಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
PublicNext
23/11/2024 07:58 am