ಶಿಗ್ಗಾಂವಿ: ಅಳುವ ಅಸ್ತ್ರವನ್ನು ಬಳಸಿ ಅಧಿಕಾರ ಪಡೆಯಬಹುದು ಎಂಬುವಂತ ಉಪಾಯ ತಲೆಕೆಳಗಾಗಿದ್ದು, ಅಳಮುಂಜಿ ಭರತ್ ಬೊಮ್ಮಾಯಿಯ ಅಳುವಿಗೆ ಬೆಲೆಯೇ ಇಲ್ಲದಂತಾಗಿದೆ.
ಶಿಗ್ಗಾಂವಿ ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಜನರನ್ನು ಭಾವುಕವಾಗಿ ಮನವೊಲಿಸಿ ವೋಟ್ ಪಡೆಯಲು ಅಳುವಿನ ದಾಳ ಉರುಳಿಸಿದ್ದು, ಈಗ ಔಟ್ ಆಗಿ ಪೆವಿಲಿಯನ್ ಗೆ ಬಂದಿದ್ದಾರೆ. ದಳಪತಿಗಳ ಅಳುವಿನ ಅಸ್ತ್ರವನ್ನು ಬಳಿಸಿಕೊಂಡು ಜನರ ವೋಟ್ ಪಡೆಯಲು ಮಾಡಿರುವ ಚುನಾವಣೆ ತಂತ್ರಗಾರಿಕೆ ವರ್ಕ್ ಔಟ್ ಆಗಿಲ್ಲ. ಬಿಜೆಪಿ ಭದ್ರಕೋಟೆಯಲ್ಲಿ ಭರತ್ ಬೊಮ್ಮಾಯಿಯವರು ಕಣ್ಣೀರು ಹಾಕಿದ್ದೇ ಅನಿಷ್ಟವೋ ಏನೋ..? ಕಮಲ ಜಾರಿ ಕಣ್ಣೀರಿನ ಕೆಸರಲ್ಲಿ ಬಿದ್ದು, ಕಾಂಗ್ರೆಸ್ಸಿನ ಬಾವುಟ ಹಾರಾಟ ನಡೆಸಿದೆ.
ರಾಜಕಾರಣದಲ್ಲಿ ಅಳುವುದು, ಎಮೋಷನಲ್ ಕಾರ್ಡ್ ಪ್ಲೇಯ್ ಮಾಡಲು ನೋಡಿದ ಮಾಜಿ ಸಿಎಂ ಮಗನನ್ನು ಜನರು ಮನೆಗೆ ಕಳಿಸಿದ್ದಾರೆ.
PublicNext
23/11/2024 04:53 pm