ಯಲ್ಲಾಪುರ: ಚಲಿಸುತ್ತಿದ್ದ ಲಾರಿಯಲ್ಲಿಯೇ ಚಾಲಕ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸಬಗೇರಿ ಕ್ರಾಸ್ ಸಮೀಪ ಈ ಘಟನೆ ನಡೆದಿದೆ. ಹೃದಯಾಘಾತದಿಂದಾಗಿ ಚಾಲಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತಪಟ್ಟ ಚಾಲಕನನ್ನು ತಮಿಳುನಾಡಿನ ಅಣ್ಣಾದೊರೆ ಎಂದು ಗುರುತಿಸಲಾಗಿದೆ. ಚಾಲಕನ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕುಟುಂಬದವರು ತಮಿಳುನಾಡಿನಿಂದ ಯಲ್ಲಾಪುರಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚಾಲಕನು ತಮಿಳುನಾಡಿನಿಂದ ಲಾರಿಯನ್ನು ಚಲಾಯಿಸಿಕೊಂಡುಬಂದು ಯಲ್ಲಾಪುರದ ಸಬಗೇರಿ ಕ್ರಾಸ್ ಬಳಿ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿಟ್ಟ ಸಂದರ್ಭದಲ್ಲಿ ಚಾಲಕನು ಮೃತಪಟ್ಟ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆಯಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
23/11/2024 07:15 pm