ಸಿದ್ದಾಪುರ: ತಂಗಿಯ ಸಂಸಾರ ಸರಿಯಾಗಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದ ಅಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ತಾಲೂಕಿನ ಶೇಲೂರ್ ನಲ್ಲಿ ನಡೆದಿದೆ.
ರಾಮ ಕೇರಿಯ ಗೌಡ ಶೇಲೂರ್ (71) ಮೃತ ವ್ಯಕ್ತಿ. ತನ್ನ ತಂಗಿಯ ಸಂಸಾರದಲ್ಲಿ ಕೌಟುಂಬಿಕ ಸಮಸ್ಯೆಗಳು ಉಂಟಾಗಿ ಬೇಸರಗೊಂಡಿರುವುದನ್ನ ಸಂಬಂದಿಕರೋರ್ವರ ಬಳಿ ಹೇಳಿಕೊಂಡಿದ್ದರು ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಸೋಮವಾರ ಮನೆಯ ಅಡುಗೆ ಕೋಣೆಯ ಗಳಕ್ಜೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Kshetra Samachara
19/11/2024 08:21 am