ಚಿಕ್ಕಮಗಳೂರು: ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರ್ತವ್ಯದ ಸಂದರ್ಭದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡಲು ಹೆಚ್ಚು ಸಮಯ ಸಿಗದೇ ಇರುವುದರಿಂದ, ಕರ್ತವ್ಯದ ಸ್ಥಳಗಳಲ್ಲಿಯೇ ಕಡಿಮೆ ಅವಧಿಯಲ್ಲಿ ಮಾಡಬಹುದಾದ ವಿವಿಧ ವ್ಯಾಯಾಮ ಮತ್ತು ಯೋಗಾಭ್ಯಾಸಗಳ ಬಗ್ಗೆ ನಗರದ ರಾಮನಹಳ್ಳಿಯ ಡಿಎಆರ್ ಮೈದಾನದಲ್ಲಿ ತರಬೇತಿ ನೀಡಲಾಯಿತು.
ಸ್ಥಳೀಯ ಫಿಟ್‌ನೆಸ್ ತಜ್ಞ ಕಿರಣ್ ಕುಮಾರ್ ರವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ವ್ಯಾಯಾಮಗಳನ್ನು ತರಬೇತಿ ಮುಖೇನ ಪ್ರದರ್ಶಿಸಿದರು. ಪೊಲೀಸರು ತಮ್ಮ ಕರ್ತವ್ಯದ ವೇಳೆಯಲ್ಲಿ ಒತ್ತಡ ನಿವಾರಣೆ, ಉಲ್ಲಾಸದಾಯಕ ಮತ್ತು ಮನಸ್ಸಿನ ಏಕಾಗ್ರತೆಯಿಂದ ಕೇಂದ್ರೀಕೃತವಾಗಿ ಪರಿಣಾಮಕಾರಿಯಾಗಿ ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಿಸಲು ಈ ವ್ಯಾಯಾಮ ಮತ್ತು ಯೋಗಾಭ್ಯಾಸ ಸಹಾಯ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
Kshetra Samachara
22/11/2024 05:46 pm