ಚಿಕ್ಕಮಗಳೂರು: ಆದಿಚುಂಚನಗಿರಿ ಆಸ್ಪತ್ರೆ ಬಿ ಜಿ ನಗರ, ರೋಟಾಪ್ಲಾಸ್ಟ್ ಇಂಟರ್ನ್ಯಾಷನಲ್ ಸಂಸ್ಥೆ, ಅಮೆರಿಕ ಮತ್ತು ರೋಟರಿ ಬೆಂಗಳೂರು ಉತ್ತರ ಇವರ ಸಹಯೋಗದೊಂದಿಗೆ ಡಿಸೆಂಬರ್ 1ರಿಂದ ಡಿಸೆಂಬರ್ 13ರವರೆಗೆ ಉಚಿತ ಸೀಳು ತುಟಿ, ಸೀಳು ಅಂಗುಳ ಮತ್ತು ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳ ಉಚಿತ ಶಸ್ತ್ರಚಿಕಿತ್ಸ ಶಿಬಿರವನ್ನು ಬೆಂಗಳೂರಿನ ಬಿ ಜಿ ನಗರ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟರ್ಡ್ ಸಿ ಕೆ ಸುಬ್ಬರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ, ಔಷದೋಪಚಾರ ಮತ್ತು ವಾರ್ಡ್ ಗಳ ಸೌಲಭ್ಯ ಹಾಗೂ ರೋಗಿಗಳ ಸಹಾಯಕರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಜಯದೇವ್, ರಘು ಉಪಸ್ಥಿತರಿದ್ದರು.
Kshetra Samachara
23/11/2024 08:13 pm