ವಿಜಯಪುರ: ಬಿಜೆಪಿ ಆಡಳಿತದಲ್ಲೂ ಪಹಣಿಯಲ್ಲಿ ವಕ್ಫ್ ಎಂದು ನಮೂದು ಮಾಡಲಾಗಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಫ್ ಪರ ಭರವಸೆ ನೀಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂಸತ್‌ನಲ್ಲಿ ವಕ್ಫ್ ಪರವಾಗಿ ಪ್ರಶ್ನೆ ಕೇಳಿದ್ದರು. ಆಗ ಸದನದಲ್ಲೇ ವಕ್ಫ್ ಪರ ಉತ್ತರಿಸಲಾಗಿದೆ. ಇದೀಗ ಬಿಜೆಪಿಯವರು ವಕ್ಫ್ ವಿರುದ್ಧವೇ ಹೋರಾಟ ಮಾಡಿದ್ದಾರೆ. ವಕ್ಫ್ ಹೋರಾಟದ ವಿಚಾರದಲ್ಲಿ ಬಿಜೆಪಿಯಲ್ಲಿ ಕ್ರೆಡಿಟ್‌ಗಾಗಿ ಪೈಪೋಟಿ ನಡೆದಿದೆ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷರನ್ನು ತೆಗೆಯಲು ಇವರನ್ನು ಅವರು ತೆಗೆಯಬೇಕು ಅನ್ನೋ ಗೊಂದಲದಲ್ಲಿ ಬಿಜೆಪಿಯವರು ಡ್ರಾಮಾ ಮಾಡುತ್ತಿದ್ದಾರೆ 10 ವರ್ಷ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 1974 ರ ಗೆಜೆಟ್ ಕುರಿತು ಯಾಕೆ ಹೋರಾಟ ಮಾಡಲಿಲ್ಲ? 10 ವರ್ಷ ಕುಂಭಕರ್ಣ ನಿದ್ರೆಯಲ್ಲಿದ್ದರಾ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಇದು ರಾಜಕೀಯ ಪ್ರೇರಿತ ಹೋರಾಟ ಅಷ್ಟೇ. ಬಿಜೆಪಿ ಕಾಲದಲ್ಲಿ ವಕ್ಫ್ ಕುರಿತು ನೋಟಿಸ್ ನೀಡಲಾಗಿದೆ ಎಂದ ಅವರು, ಇನ್ನೂ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಹಾಗೂ ರಾಜ್ಯಗಳ ಚುನಾವಣೆ ಕುರಿತು ಪ್ರತಿಕ್ರಿಯಿಸಿ ನಾವು ಆಶಾಭಾವದಿಂದ ಇದ್ದೀವಿ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
PublicNext
22/11/2024 05:13 pm