ಹುಬ್ಬಳ್ಳಿ: ರಾಜ್ಯ ಸರ್ಕಾರದ ದುರಾಢಳಿತ ಹಾಗೂ ಹಗರಣಗಳ ಹಿನ್ನೆಲೆಯಲ್ಲಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಎಚ್ಚರಿಕೆ ನೀಡಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ವಾಲ್ಮೀಕಿ ಹಗರಣ, ಮುಡಾ ಹಗರಣ ಸೇರಿದಂತೆ ಹಲವು ವಿಷಯ ಚರ್ಚೆ ಜೊತೆಗೆ ಹೋರಾಟ ಮಾಡಲಾಗುವುದು. ವಕ್ಫ ವಿಚಾರ ಸಹ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ ಎಂದರು.
ಬೆಂಗಳೂರು ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಚಿಕಿತ್ಸೆಗೆ 20 ರಷ್ಟು ದುಬಾರಿ ವಿಚಾರವಾಗಿ ಮಾತನಾಡಿದ ಅವರು, ಸರಕಾರದಲ್ಲಿ ಆರ್ಥಿಕ ವ್ಯವಸ್ಥೆ ಹದೆಗೆಟ್ಡಿದೆ. ಅಬಕಾರಿ, ಇಂಧನ ಉಪ ನೋಂದಣಿ ಇಲಾಖೆಯಲ್ಲಿ ಸಾಕಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಸರಕಾರಕ್ಕೆ ಸಾಕಷ್ಟು ಆರ್ಥಿಕ ಸಮಸ್ಯೆ ಆಗತಾ ಇದೆ. ಹಣ ಎಲ್ಲಲ್ಲಿ ಸಿಗುತ್ತದೆ ಆದ್ದರಿಂದ ಹೆಚ್ಚಳ ಮಾಡತಾ ಇದ್ದಾರೆ. ಸರಕಾರಕ್ಕೆ ಯಾವುದೇ ಕಾರಣಕ್ಕೋ ಆರೋಗ್ಯ ಮತ್ತು ಶಿಕ್ಷಣ ವಿಚಾರದಲ್ಲಿ ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದರು.
Kshetra Samachara
22/11/2024 01:58 pm