ಹುಬ್ಬಳ್ಳಿ: ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿಯನ್ನು ಮುನ್ನಡೆಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಚಿವರು ಹಾಗೂ ಕೆಲವೊಂದು ಜನಪ್ರತಿನಿಧಿಗಳು ಸ್ವತಃ ತಾವೇ ಒಪ್ಪಿಕೊಂಡಿದ್ದು, ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ ಎಂದಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಾಂಗ್ರೆಸ್ಸಿನ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜನರಿಗೆ ನೀಡಿರುವ ಪಡಿತರ ಕಾರ್ಯ ವಿಚಾರದಲ್ಲಿಯೇ ನೋಡುವುದಾದರೇ ಈ ಸರ್ಕಾರ ಕೊಡುವುದು ತಡವಿಲ್ಲ. ಹಿಂಪಡೆಯುವುದು ತಡ ಇಲ್ಲ ಎಂಬುವಂತಾಗಿದೆ. ಪಡಿತರ ಚೀಟಿ ವಿಷಯದಲ್ಲಿ ಭಾರತೀಯ ಜನತಾ ಪಕ್ಷದ ಹೋರಾಟಕ್ಕೆ ಮಣಿದು ಸರ್ಕಾರ ಇಂತಹದೊಂದು ನಿರ್ಧಾರಕ್ಕೆ ಬಂದಿದೆ ಎಂದರು.
ಮುಡಾ ಹಗರಣ, ವಾಲ್ಮೀಕಿ ಹಗರಣ, ಪಡಿತರ ಚೀಟಿಯಲ್ಲಿ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದೆ. ಆದರೆ ನಾಚಿಕೆ ಮಾನ ಮಾರ್ಯಾದೆ ಇಲ್ಲದ ಸರ್ಕಾರ ಜನರ ಜೊತೆಗೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/11/2024 01:35 pm