ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ತಕ್ಷಣ ಸರ್ಕಾರಿ ಕೆರೆ ಎನ್ನುವುದನ್ನು ತೆಗೆದು ಹಿಂದಿನಂತೆ ಗಣಪತಿ ಕೆರೆ ಎಂದು ದಾಖಲಿಸಬೇಕು - ಅ.ಪು.ನಾರಾಯಣಪ್ಪ

ಸಾಗರ : ಇತಿಹಾಸ ಪ್ರಸಿದ್ದ ಗಣಪತಿ ಕೆರೆಯನ್ನು ಸರ್ಕಾರಿ ದಾಖಲೆಯಲ್ಲಿ ಸರ್ಕಾರಿ ಕೆರೆ ಎಂದು ಬದಲಾಯಿಸಲಾಗಿದೆ. ತಕ್ಷಣ ಸರ್ಕಾರಿ ಕೆರೆ ಎನ್ನುವುದನ್ನು ತೆಗೆದು ಹಿಂದಿನಂತೆ ಗಣಪತಿ ಕೆರೆ ಎಂದು ದಾಖಲಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಒತ್ತಾಯಿಸಿದ್ದಾರೆ.

ಇಲ್ಲಿನ ಗಣಪತಿ ಕೆರೆ ಅಂಗಳದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವ ಮತ್ತು ಗಣಪತಿ ಕೆರೆಗೆ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ, ಈ ವರ್ಷ ಕೆರೆಯ ಒಂದು ಭಾಗದಲ್ಲಿ ನಿಂತು ಗಂಗಾರತಿ ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ಕೆರೆಯ ಸುತ್ತಲೂ ನಿಂತು ಗಂಗಾರತಿ ಮಾಡುವ ವಾತಾವರಣ ನಿರ್ಮಿಸಲು ನಮ್ಮ ಕಾರ್ಯಕರ್ತರು ಪ್ರಯತ್ನಿಸಬೇಕು ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಕಾರ್ತಿಕ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಇದೇ ಸಂದರ್ಭದಲ್ಲಿ ಗಣಪತಿ ಕೆರೆಗೆ ಗಂಗಾರತಿ ಮಾಡುವ ಮೂಲಕ ಊರಿಗೆ ಜೀವಜಲ ನೀಡುವ ನೀರಿನ ಮೂಲವನ್ನು ಪೂಜಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆರೆಯ ಸುತ್ತಲೂ ಆರತಿ ಬೆಳಗಬೇಕು ಎನ್ನುವ ಹಿರಿಯರ ಆಶಯ ಈಡೇರಿಸಲು ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

ಪ್ರಮುಖರಾದ ಐ.ವಿ.ಹೆಗಡೆ, ಸಂತೋಷ್ ಶಿವಾಜಿ ಮಾತನಾಡಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಗಣೇಶ್‌ಪ್ರಸಾದ್, ಸಂತೋಷ್ ಶೇಟ್, ಯು.ಜಿ.ಶ್ರೀಧರ ರಾವ್, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ಪ್ರಮುಖರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

19/11/2024 09:17 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ