ಚಿಕ್ಕಮಗಳೂರು: ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂಗೌಡನ ಎನ್ಕೌಂಟರ್ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕೂಂಬಿಂಗ್ ಮತ್ತಷ್ಟು ಚುರುಕುಗೊಳಿಸಲಾಗಿದೆ.
ವಾರದ ಹಿಂದಷ್ಟೆ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ಭೇಟಿ ನೀಡಿದ್ದ ಮುಂಡಗಾರು ಲತಾ, ಜಯಣ್ಣ ತಂಡ, ಸುಬ್ಬೇಗೌಡ ಎಂಬುವರ ಮನೆಯಲ್ಲಿ ಊಟ ಮಾಡಿ, ಗನ್ ಬಿಟ್ಟು ಹೋಗಿದ್ದರು. ಇದಾದ ನಂತರ ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಇದೀಗ
ವಿಕ್ರಂಗೌಡ ಎನ್‌ಕೌಂಟರ್ ಬಳಿಕ ಕೂಂಬಿಂಗ್ ಮತ್ತಷ್ಟು ಚುರುಕುಗೊಳಿಸಿ ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ವಿಕ್ರಂಗೌಡ ಮೇಲೆ ಕೊಲೆ, ಡಕಾಯಿತಿ, ಜನರನ್ನು ಬೆದರಿಸಿರೋದು, ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿರೋದು, ಆಯುಧ ಹಿಡಿದು ಓಡಾಡಿರುವುದು ಸೇರಿದಂತೆ ಒಟ್ಟು 13 ಪ್ರಕರಣಗಳಲ್ಲಿ ಚಿಕ್ಕಮಗಳೂರು ಪೊಲೀಸರಿಗೆ ಬೇಕಾಗಿದ್ದ. 2007 ರಲ್ಲಿ ಪೊಲೀಸ್ ಮಾಹಿತಿದಾರ ಎಂದು ವೆಂಕಟೇಶ್ ಎಂಬುವನ ಕೊಲೆ ಈತನ ಮೇಲಿದ್ದ ಪ್ರಮುಖ ಪ್ರಕರಣವಾಗಿತ್ತು.
ಇಷ್ಟು ಪ್ರಕರಣಗಳಲ್ಲಿ ಕಾಫಿನಾಡ ಪೊಲೀಸರಿಗೂ ಬೇಕಾಗಿದ್ದ ವಿಕ್ರಂಗೌಡ ಸದ್ಯ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೀತಂ ಬೈಲುವಿನಲ್ಲಿ ಹತನಾಗಿದ್ದಾನೆ.
PublicNext
19/11/2024 07:04 pm