ಮೈಸೂರು: ತವರು ಜಿಲ್ಲೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡಿದ್ದು, ಒಂದು ಕಡೆ ಕಾಲೇಜಿಗೆ 219 ಕೋಟಿಯಾದ್ರೆ, ಇನ್ನೊಂದು ಕಡೆ ಆಪ್ತ ಸ್ನೇಹಿತ ಸಚಿವ ಮಹದೇವಪ್ಪ ಕ್ಷೇತ್ರಕ್ಕೆ ಡಬಲ್ ಕೊಡುಗೆ ನೀಡಿದ್ದಾರೆ. ಹೌದು, ಇಂದು ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 470.84 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ರು.
ಇದಕ್ಕೂ ಮುನ್ನ ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಸಿಎಂ ಮಾಡಿದ್ರು. ಈ ವೇಳೆ ವೇದಿಕೆಯಲ್ಲಿ ಸಿಎಂ ಅವ್ರಿಗೆ ಸನ್ಮಾನ ಮಾಡಿದ್ರೆ, ಸಿಎಂ ಅವ್ರು ಈ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸಂತಸ ತಂದಿದೆ ಎಂದ್ರು.
PublicNext
13/11/2024 09:29 pm