ಮುನ್ನಿ ಬದ್ ನಾಂ ಹೂಯಿ ಎಂದು ಡ್ಯಾನ್ಸ್ ಮಾಡಿದ ಬಾಲಿವುಡ್ ನ ಮುನ್ನಿ ಮಲೈಕಾ ಅರೋರಾ ವಯಸ್ಸು 51 ಆದರೂ ಮೈ ಮಾಟ ಹದಿನೆಂಟರ ಹೆಣ್ಣು ಮಕ್ಕಳಂತೆ.ಗಂಡ ಅರ್ಭಾಸ್ ಖಾನ್ ನಿಂದ ಡಿವೋರ್ಸ್ ಪಡೆದ ನಂತರ ಅರ್ಜುನ್ ಕಪೂರ್ ಜೊತೆ ಈಕೆ ಡೇಟಿಂಗ್ ಮಾಡ್ತಾ ಇದ್ರು. ಅರ್ಜುನ್ ಗೆ 39 ವರ್ಷವಾದರೆ ಮಲೈಕಾ 51, ಮಲೈಕಾ 12 ವರ್ಷ ದೊಡ್ಡವಳು.ಇಷ್ಟೆಲ್ಲಾ ವಯಸ್ಸಿನ ಅಂತರವಿದ್ದರೂ ಇವರಿಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿತ್ತು ಇತ್ತೀಚಿಗಿನ ದಿವಸಗಳಲ್ಲಿ ಇವರ ಮಧ್ಯೆ ಬ್ರೇಕಪ್ ಆಗಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ.ಆದರೆ ಇನ್ನೂ ಸ್ಪಷ್ಟೀಕರಣ ಇವರಿಬ್ಬರಿಂದ ಸಿಕ್ಕಿಲ್ಲ. ಇದರ ಮಧ್ಯೆ ಅರ್ಜುನ್ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾ ನಂತರ ಸಿಂಗಂ ಎಗೇನ್ ಸಿನಿಮಾದ ಮೂಲಕ ಮತ್ತೇ ಯಶಸ್ಸಿನ ಮುಖ ನೋಡಿದ್ದಾರೆ.
ಮಲೈಕಾ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ನವೆಂಬರ್ ಚಾಲೆಂಜ್ ಎಂದು ಎಂಟು ಪಾಯಿಂಟ್ಸ್ ಬರೆದು ಪೋಸ್ಟ್ ಮಾಡಿದ್ದಾರೆ ಅವುಗಳೆಂದರೆ, ನೋ ಆಲ್ಲೋಹಾಲ್,ಎಂಟು ಗಂಟೆ ನಿದ್ದೆ,ಮಾರ್ಗದರ್ಶಕರನ್ನು ಪಡೆಯುವುದು, ಯಾವಾಗಲೂ ಎಕ್ಸಸೈಸ್ ಮಾಡುವುದು,ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದು,ಬೆಳಗ್ಗೆ ಹತ್ತು ಗಂಟೆಯ ತನಕ ಏನು ತಿನ್ನದೇ ಇರುವುದು,ಪ್ರೋಸೆಸುಡ್ ಆಹಾರ ತಿನ್ನದೆ ಇರುವುದು,ರಾತ್ರಿ ಎಂಟರ ನಂತರ ಏನು ತಿನ್ನದೇ ಇರುವುದು.ಹೀಗೆ ಸ್ಟ್ರಿಕ್ಟ್ ಲೈಫ್ ಸ್ಟೈಲ್ ಅಡಾಪ್ಟ್ ಮಾಡಿಕೊಳ್ಳುವ ಮೂಲಕ ಮಲೈಕಾ ತನ್ನ ಬ್ರೇಕಪ್ ನೋವು ಮರೆಯಲು ಯತ್ನಿಸುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
PublicNext
12/11/2024 07:31 pm