ಮಾತೃ ಸ್ಪರ್ಶವಿಲ್ಲದೆ ಈ ಭೂಮಿಯ ಮೇಲೆ ಯಾವ ಜೀವಿಯೂ ಇಲ್ಲ. ಅಮ್ಮನ ಮಡಿಲ ಸ್ಪರ್ಶ, ಒಲವಿನ, ನಲಿವಿನ ಆನಂದಕ್ಕೆ ಬೆಲೆ ಕಟ್ಟಲಾಗದು. ತಾಯಿಯ ಅಪ್ಪುಗೆ, ಮಡಿಲ ಬೆಚ್ಚಗೆ ಆತಂಕ ರಹಿತ ನೆಮ್ಮದಿಯ ರಹದಾರಿ.
ಮಂಗನಿಂದ ಮಾನವ ಎನ್ನುತ್ತಾರೆ ಆದರೆ ಮಂಗಗಳಿಗೆ ಇರುವ ಮಮತೆ–ಮಮಕಾರ ಮಾನವರಿಗೆ ಕೆಲವೊಮ್ಮೆ ಇಲ್ಲದಾಗತ್ತೆ. ಪ್ರಾಣಿಗಳಿಗೂ ಮರಿಗಳ ಮೇಲೆ ಮಮತೆ, ಕಂದಮ್ಮಗಳ ಬಗ್ಗೆ ಕನಿಕರ ಇದ್ದೇ ಇರುತ್ತದೆ. ಯಾವುದೇ ಪ್ರಾಣಿ ಪಕ್ಷಿಗಳಾಗಲಿ ಅಮ್ಮನ ಅಗಲಿಕೆಯನ್ನು ಅರಿಸಿಕೊಳ್ಳುವುದು ಅಸಾಧ್ಯ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಹುಟ್ಟಿದಾಗಿನಿಂದಲೂ ಮಗುವನ್ನು ಬಿಡದೆ ಬರುವ ಎಲ್ಲ ಆಪತ್ತು ಮತ್ತು ಪ್ರಪಂಚದಿಂದ ರಕ್ಷಿಸುತ್ತಿದ್ದ ತಾಯಿಯು ಮರಣ ಹೊಂದಿದ್ದಳು. ಅಮ್ಮ ಮತ್ತೆ ಮರಳಿ ಬರಲ್ಲ ಎಂದು ಆ ಪುಟ್ಟ ಜೀವಿಗೆ, ತನ್ನ ತಾಯಿಯಿಲ್ಲದೆ ಬದುಕುವುದು ಹೇಗೆಂದು ತಿಳಿದಿಲ್ಲ.
ಅಮ್ಮ ಇನ್ನಿಲ್ಲ ಎಂಬುದೇ ತಿಳಿಯದ ಕೋತಿಮರಿ ಸಂಕಟ ಪಡುತ್ತಿರುವ ವಿಡಿಯೋ ಮನಕಲಕುವಂತಿದೆ. ಮಂಗವೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರದ ವೇಳೆ ಮರಿ ಮಂಗ ತನ್ನ ತಾಯಿಯನ್ನು ಬಿಡದೆ ಮರಳಿ ಮರಳಿ ಮಣ್ಣಲ್ಲಿರುವ ಅಮ್ಮನ ಮಡಿಲು ಸೇರಲು ಮುಂದಾಗುವ ದೃಶ್ಯ ಕಣ್ಣೀರು ತರಿಸುತ್ತದೆ.
PublicNext
11/11/2024 03:11 pm