ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಶಿಗ್ಲಿ ಗ್ರಾಮಕ್ಕೆ ಶಾಲೆಗೆ ಬರುತ್ತಾರೆ. ಆದರೆ ಅವರಿಗೆ ಸರಿಯಾದ ಬಸ್ ಸೌಲಭ್ಯವಿಲ್ಲದೇ ದಿನನಿತ್ಯವೂ ಬಸ್‌ನಲ್ಲಿ ಅಪಾಯಕಾರಿಯಾಗಿ ಪ್ರಯಾಣ ಮಾಡುತ್ತಾರೆ.
ಶಿಗ್ಲಿ ಗ್ರಾಮಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಕ್ಕಳು ಶಾಲೆಗೆ ಬರುತ್ತಾರೆ. ಆದರೆ ಸರಿಯಾದ ಬಸ್ ಸೌಲಭ್ಯ ಇಲ್ಲದೇ ದಿನನಿತ್ಯವೂ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ ಬೆಳೆಸಬೇಕು. ಇದರಿಂದ ಶಾಲಾ ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ.
ಶಿಗ್ಲಿ ಗ್ರಾಮದಿಂದ ಡೊಡ್ಡೂರು, ಸೂರಣಗಿ, ಉಳಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹೋಗಲು ಮಕ್ಕಳು ದಿನನಿತ್ಯ ಪರದಾಡಬೇಕಾಗಿದೆ. ಸಾರಿಗೆ ಅಧಿಕಾರಿಗಳು ಹೆಚ್ಚಿನ ಬಸ್ ಸೌಲಭ್ಯ ನೀಡಬೇಕಿದೆ.
ಸುರೇಶ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ
PublicNext
10/11/2024 07:12 pm