ತುಮಕೂರು : ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಮೂವರು ಆರೋಪಿಗಳಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿ, ಎಸ್‌ಸಿ (ಪೋಕ್ಸೋ) ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಮೊದಲನೇ ಆರೋಪಿ ತುರುವೇಕೆರೆಯ ನಾಗೇಂದ್ರನಿಗೆ 6 ಲಕ್ಷ ರೂ, ಎರಡನೇ ಆರೋಪಿ ರತ್ನಮ್ಮ ಹಾಗೂ ಮೂರನೇ ಆರೋಪಿ ನಾಗರತ್ನಗೆ ತಲಾ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ. ಬಾಲಕಿಯು 2016 ರ ಮಾ 5 ರಂದು ರೇಷನ್ ತರಲು ಹೋದಾಗ ಆರೋಪಿ ರತ್ನಮ್ಮ ಆಕೆಯನ್ನು ಪರಿಚಯ ಮಾಡಿಕೊಂಡು ಏ. 5 ರಂದು ತನ್ನ ಮನೆಗೆ ಕರೆದುಕೊಂಡು ಹೋಗಿ ನಂತರ ಕುರುಬರ ಬೀದಿಯ ಮನೆಯೊಂದರಲ್ಲಿ ಕೂಡಿಹಾಕಿ ಕೊಲೆ ಬೆದರಿಕೆ ಹಾಕಿ ಮೂರನೇ ಆರೋಪಿ ನಾಗರತ್ನ ಅವರನು ಮನೆಗೆ ಕರೆಸಿಕೊಂಡು ಆರೋಪಿ ನಾಗೇಂದ್ರ ಅವರೊಂದಿಗೆ ಸೇರಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು.
ಈ ಸಂಬಂಧ ತನಿಖಾಧಿಕಾರಿ ಚಂದ್ರಶೇಖರ್ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
Kshetra Samachara
09/11/2024 12:31 pm