ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಬಾಲಕಿ ಮೇಲೆ ನಿರಂತರ ಅತ್ಯಾಚಾರ - ಅ‍ಪರಾಧಿಗೆ 20 ವರ್ಷ ಜೈಲು

ತುಮಕೂರು : ಬಾಲಕಿಯನ್ನು ಮದುವೆಯಾಗಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಕರೆಚಿತ್ತಪ್ಪ ಎಂಬಾತನಿಗೆ ಪೋಕ್ಸ್‌ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ, 1.50 ಲಕ್ಷ ದಂಡ ವಿಧಿಸಿದೆ.

ಕರೆಚಿತ್ತಪ್ಪಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಬಾಲಕಿ ಯನ್ನು ಪುಸಲಾಯಿಸಿ 2021ರ ಸೆ.18ರಂದು ಮದುವೆಯಾಗಿದ್ದ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಣಿಗಲ್ ಇನ್‌ಸ್ಪೆಕ್ಟರ್ ವಿ.ಎಂ.ಗುರುಪ್ರಸಾದ್ ತನಿಖೆ ನ ಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪೋಕ್ಸ್‌ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿದರು. ಕರೆಚಿತ್ತಪ್ಪ ವಿರುದ್ಧ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ಆದೇಶಿಸಿದರು. ಬಾಲಕಿ ಪರವಾಗಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು .

Edited By : PublicNext Desk
PublicNext

PublicNext

14/11/2024 02:34 pm

Cinque Terre

11.17 K

Cinque Terre

0

ಸಂಬಂಧಿತ ಸುದ್ದಿ