ದೀಪಿಕಾ, ರಣವೀರ್ ದಂಪತಿ ತನ್ನ ಮಗುವಿಗೆ ದೀಪಾವಳಿಯಂದು ದುವಾ ಎಂದು ಹೆಸರಿಟ್ಟಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ.ದುವಾ ಎಂದರೆ ʼಪ್ರಾರ್ಥನೆʼ ಎಂದರ್ಥ. ಹಿಂದೂಗಳಾಗಿ ಪ್ರಾರ್ಥನ ಎಂದು ಹೆಸರಿಡಬಹುದಿತ್ತು ಅದರ ಬದಲು ಉರ್ದು ಹೆಸರು ದುವಾ ಇಟ್ಟಿದ್ದು ಸರಿಯಲ್ಲ ಅನ್ನುವ ವಾದ ಒಂದು ಪಂಗಡದಾಗಿದ್ದರೆ.ಇನ್ನೊಂದು ಪಂಗಡದವರು ಹೇಳುವ ಪ್ರಕಾರ ಅವರ ಮಗು ಅವರಿಷ್ಟ ಏನಾದರೂ ಹೆಸರಿಡಲಿ ನಿಮಗೇನು ಸಮಸ್ಯೆ ಎಂದು ತಕರಾರು ಎತ್ತಿದವರಿಗೆ ಪ್ರಶ್ನಿಸುತ್ತಿದ್ದಾರೆ.
ಅಸಲಿಗೆ ಹಿಂದಿಯಲ್ಲಿ ಹಲವಾರು ಉರ್ದು ಪದಗಳು ಬೆರೆತುಕೊಂಡಿದೆ.ಉದಾಹೆಣೆಗೆ दोस्त ಇದು ಉರ್ದು ಪದ ಹಿಂದಿಯಲ್ಲಿ मित्र , दिल ಉರ್ದು ಪದ ಹಿಂದಿಯಲ್ಲಿ हृदय ಹೀಗೆ ಹಲವಾರು ಪದಗಳು ದಿನ ನಿತ್ಯದ ಬಳಕೆಯಲ್ಲಿ ಅಡಕವಾಗಿದೆ. ʼಭಗವಾನ್ ಕೀ ದುವಾʼ ಅನ್ನೋದು ಆಡು ಭಾಷೆಯಲ್ಲಿ ಹೇಳುವ ಮಾತು ಹಾಗಂತ ಅದನ್ನು ಉರ್ದು,ಹಿಂದಿ ಎಂದು ಭಾಷೆಗಳ ಕುರಿತು ಕಿತ್ತಾಡುವುದು ಸರಿಯಲ್ಲ.ಕಾಶ್ಮೀರಿ ಪಂಡಿತರು ಉರ್ದು ಮಾತನಾಡುತ್ತಾರೆ ಹಾಗಂತ ಅವರು ಮುಸ್ಲೀಂ ರೇ ಅಲ್ಲ ಅಲ್ವಾ. ಭಾಷೆಗಳ ಮಧ್ಯೆ ಜಾತಿ ತರುವುದು ಅಕ್ಷರಶಃ ತಪ್ಪು. ಎಲ್ಲಾ ವಿಚಾರಕ್ಕೂ ತಲೆ ಹಾಕದೇ ನಮ್ಮದೇನು ಕೆಲಸ ಅಷ್ಟು ನೋಡಿಕೊಂಡಿದ್ದರೆ ಏಲ್ಲೆಡೆ ಶಾಂತಿ ನೆಲೆಸುವುದು.
PublicNext
08/11/2024 08:04 pm