ಚಿಕ್ಕಮಗಳೂರು : ಸಾಮಾನ್ಯ ಕ್ರೀಡಾಪಟುಗಿಂತ ವಿಶೇಷ ಚೇತನ ಕ್ರೀಡಾಪಟುಗಳು ಹೆಚ್ಚಿನ ಸಾಧನೆಗೈಯುವ ಮೂಲಕ ಯಶಸ್ವಿ ಕ್ರೀಡಾಪಟುವಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಪ್ರಾಥಮಿಕ ದೈಹಿಕ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ಡಾ|| ಫೈರೋಜ್ ಅಹ್ಮದ್ ಹೇಳಿದರು.
ನಗರದ ಸುಭಾಶ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ. ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ಧ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಮಾ ರೋಪ ಸಮಾರಂಭದಲ್ಲಿ ಮಕ್ಕಳಿಗೆ ಬುಧವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಾಮಾನ್ಯ ಮಕ್ಕಳಂತೆ ವಿಶೇಷ ಚೇತನ ಮಕ್ಕಳಿಗೆ ಕ್ರೀಡೆಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ 100, 50 ಮೀಟರ್ ಓಟ, ಗುಂಡುಎಸೆತ, ಜಾವಲಿಂಗ್ ಥ್ರೋ ಹಾಗೂ ಉದ್ದಜಿಗಿತ ಕ್ರೀಡೆಗಳನ್ನು ಆಯೋಜಿಸಿ ದೈಹಿಕವಾಗಿ ಸಾಮರ್ಥ್ಯ ತುಂಬಿ ಮಕ್ಕಳಿಗೆ ಅನುಕೂಲ ಕಲ್ಪಿಸುತ್ತಿದೆ ಎಂದು ಹೇಳಿದರು.
Kshetra Samachara
06/11/2024 07:00 pm