ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಆಸ್ತಿಗಾಗಿ ಸಂಬಂಧಿಕನ ಅಪಹರಣ, ಭೀಕರ ಹತ್ಯೆ- 10 ಆರೋಪಿಗಳು ಅರೆಸ್ಟ್

ವಿಜಯಪುರ: ಅಕ್ಟೋಬರ್ 6ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ಸೇತುವೆ ಬಳಿ ನಿವೃತ್ತ ನೌಕರ ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದ ಮಹೇಶ ಮಳಯ್ಯ ಪೂಜಾರಿ (65) ಎಂಬವರನ್ನು ಕೊಲೆ ಮಾಡಿ, ಬಿಸಾಡಲಾಗಿತ್ತು.

ಈ ಕೊಲೆಯ ಹಿಂದೆ ಆಸ್ತಿ ವಿವಾದ ಮತ್ತು ಸಂಬಂಧಿಕರೇ ಅಪಹರಿಸಿ, ಕಾರಿನಲ್ಲಿ ಕರೆದೊಯ್ದು, ಕುತ್ತಿಗೆಗೆ ವಯರ್‌ನಿಂದ ಬಿಗಿದು ಭೀಕರವಾಗಿ ಹತ್ಯೆಗೈದಿರುವುದು ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ 10 ಜನರನ್ನು ಬಂಧಿಸಿದ್ದಾರೆ.

ಅರುಣ್ ಪೂಜಾರಿ, ವಿಶ್ವನಾಥ ಪೂಜಾರಿ, ಚಂದ್ರಶೇಖರ ಪೂಜಾರಿ, ನೀಲೇಶ ಪೂಜಾರಿ, ರಮೇಶ ಮಾದರ, ಅಜಯ ಬಾಳು ಚವಾಣ್, ಸಂದೀಪ, ಚಂದ್ರಶೇಖರ ಹಳ್ಳೂರ, ಸುನೀಲ ಚವಾಣ್ ಹಾಗೂ ರಾಮಗೊಂಡ ಒಳಸಂಗ ಎಂಬುವರನ್ನು ಬಂಧಿಸಲಾಗಿದೆ.

ಆಸ್ತಿ ವಿಚಾರವಾಗಿ ಮಹೇಶರನ್ನು ಕೊಲೆ ಮಾಡಲು ಅಪಹರಣಕಾರರನ್ನು ಬಳಸಿಕೊಳ್ಳಲಾಗಿದೆ ಎಂಬ ಅಂಶ ವಿಚಾರಣೆ ವೇಳೆ ಬಯಲಾಗಿದೆ ಎಂದು ಎಸ್ಪಿ ಪ್ರಸನ್ನ ದೇಸಾಯಿ ತಿಳಿಸಿದ್ದಾರೆ.

Edited By : Somashekar
PublicNext

PublicNext

30/10/2024 06:31 pm

Cinque Terre

46.51 K

Cinque Terre

0