ಕುಂದಗೋಳ : ಎಲ್ಲೆಡೆ ಹರಹರ ಮಹಾದೇವ ಘೋಷಣೆ... ಒಬ್ಬರಿಗಿಂತ ಒಬ್ಬರು ಈಜುತ್ತಾ ಮುನ್ನುಗ್ಗುವ ದೃಶ್ಯಗಳು ನೋಡುಗರಿಗೆ ಸಂಭ್ರಮವೋ ಸಂಭ್ರಮ.
ಹೌದು ! ಕುಂದಗೋಳ ಪಟ್ಟಣದ ಕೆರೆಯಂಗಳ ಮತ್ತು ಅಗಸಿಹೊಂಡ ತುಂಬಿದ ಹಿನ್ನೆಲೆಯಲ್ಲಿ ಇಂದು ತೆಪ್ಪದ ತೇರು ಮಹಾ ರಥೋತ್ಸವ ವಿಜೃಂಭಣೆಯಿಂದ ಸಾಗಿದೆ.
ಮೊದಲು ಕೆರೆಯಂಗಳದಲ್ಲಿ ನಡೆದ ತೆಪ್ಪದ ರಥೋತ್ಸವ ಬಳಿಕ ಅಗಸಿ ಹೊಂಡಕ್ಕೆ ಸಾಗಿ ಭಜನೆ ಮತ್ತು ತತ್ವಪದಗಳ ನಡುವೆ ಕೆರೆಯಂಗಳವನ್ನು ಯಶಸ್ವಿಯಾಗಿ ದಾಟಿ ಅಗಸಿಹೊಂಡದಲ್ಲಿ ಯಶಸ್ವಿಯಾಗಿ ಜರುಗಿತು.
ತೆಪ್ಪದ ರಥೋತ್ಸವದ ವೇಳೆ ಕೇಸರಿ ಧ್ವಜಗಳು ಯುವಕರ ಕೇಕೆ, ಶಿಳ್ಳೆ, ಚಪ್ಪಾಳೆ ಕೇಳಿ ಬಂದರೇ ಹಿರಿಯ ನಾಗರೀಕರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಎಲ್ಲರೂ ನೀರಿನಲ್ಲಿ ಈಜಾಡಿ ಸಂತೋಷಪಟ್ಟರು.
ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು, ಶಿವಾನಂದ ಮಠದ ಮಹಾಂತ ಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು ಗ್ರಾಮದ ಮುಖಂಡರು ಭಾಗವಹಿಸಿದ್ದರು.
Kshetra Samachara
29/10/2024 07:14 am