ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ 115ನೇ ಮನ್ ಕಿ ಬಾತ್‌ನಲ್ಲಿ ಡಿಜಿಟಲ್ ಅರೆಸ್ಟ್ ನಿಂದ ತಪ್ಪಿಸಿಕೊಳ್ಳುವ ಬಗ್ಗೆ ವಿಜಯಪುರ ಮೂಲದ ಯುವಕನ ವಿಡಿಯೋ ಪ್ರಸ್ತಾಪಿಸಿದ್ದಾರೆ. ಇದಕ್ಕೆ ವಿಜಯಪುರ ಮೂಲದ ಯುವಕ ಸಂತೋಷ್ ಪಾಟೀಲ್ (ಚೌಧರಿ) ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು! ಸೆಪ್ಟೆಂಬರ್ 16ರಂದು ವಿಜಯಪುರದ ಸಂತೋಷ್ ಪಾಟೀಲ್ (ಚೌಧರಿ) ಎಂಬಾತನಿಗೆ ಮುಂಬೈ ಅಂಧೇರಿ ಪೊಲೀಸ್ ಠಾಣೆಯ ಪಿಎಸ್ಐ ಎಂದು ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ, ಮುಂಬೈನ ಅಂದೇರಿ ನಗರಿ ಪೊಲೀಸ್ ಠಾಣೆಯಲ್ಲಿ ನಿಮ್ಮ ಮೇಲೆ ಬರೋಬ್ಬರಿ 17 ಕೇಸ್ ದಾಖಲಾಗಿವೆ ಎಂದು ಬೆದರಿಕೆ ಹಾಕಿದ್ದಾರೆ. ಆರಂಭದಲ್ಲಿ ಹೆದರಿದ ಸಂತೋಷ ಬಳಿಕ ಯಾವಾಗ ಓಟಿಪಿ, ಬ್ಯಾಂಕ್ ಖಾತೆಗಳ ಬಗ್ಗೆ ವಿಚಾರಿಸಲು ಆರಂಭಿಸಿದ್ದಾರೋ ಆಗ ಅಲರ್ಟ್ ಆಗಿದ್ದಾನೆ. ನಕಲಿ ಪೊಲೀಸರು ಅಂತ ಗೊತ್ತಾದ ಬಳಿಕ ಅಮಾಯಕನಂತೆ ನಟಿಸಿ ವಿಡಿಯೋ ತುಣುಕುಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವಿಡಿಯೋ, ಕೊಲೆ ಬೆದರಿಕೆ ವಿಡಿಯೋಗಳ ಸಮೇತ ದೂರು ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ನಲ್ಲಿ ಡಿಜಿಟಲ್ ಅರೆಸ್ಟ್ ನಿಂದ ತಪ್ಪಿಸಿಕೊಳ್ಳುವ ಬಗ್ಗೆ ವಿಡಿಯೋ ಸಮೇತ ಪ್ರಸ್ತಾಪಿಸಿದ್ದಾರೆ. ಇದೀಗ ಸಂತೋಷ ಪಾಟೀಲ್ ಬಗ್ಗೆ ವಿಜಯಪುರ ಜಿಲ್ಲೆಯ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯಪುರ ಮೂಲದ ಯುವಕನ ಕಾರ್ಯದ ಬಗ್ಗೆ ಪ್ರಸ್ತಾಪಿಸಿದ್ದು ಯುವಕ ಸಂತೋಷ್ ಪಾಟೀಲ್‌ಗೆ ಇನ್ನಿಲ್ಲದ ಸಂತಸ ತಂದಿದೆ.
ಮಂಜು ಕಲಾಲ, ಪಬ್ಲಿಕ ನೆಕ್ಸ್ಟ ವಿಜಯಪುರ
PublicNext
28/10/2024 02:50 pm