ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನವದುರ್ಗಾ ಭಕ್ತಿ ಖುಷಿ- ಸೀರೆ ಗೆದ್ದು ಸಂಭ್ರಮಿಸಿದ ಮಹಿಳಾ ಮಣಿಗಳು

ಹುಬ್ಬಳ್ಳಿ: ಗೃಹಿಣಿಯಾಗಿದ್ದರೂ ಸಂಸಾರದ ನೊಗ ಹೊತ್ತ ಅದೆಷ್ಟೋ ಮಹಿಳೆಯರ ಸಮಾಗಮಕ್ಕೆ ಸಾಕ್ಷಿಯಾಗಿದ್ದೇ ನವದುರ್ಗಾ ಸಂಭ್ರಮ. ನಾರಿಯರನ್ನು ಓರೆಗಣ್ಣಲ್ಲಿ ನಾಚಿಸುವ ಆ ಸೀರೆಯ ಖುಷಿ ಸಡಗರ ಅದ್ಭುತ ಕ್ಷಣಗಳಾಗಿ ಮೂಡಿ ಬಂತು.

ನವರಾತ್ರಿ ಹಬ್ಬವನ್ನು ನಾಡಿನಲ್ಲಿ ವೈಭವಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಆದರೆ, ಹುಬ್ಬಳ್ಳಿ- ಧಾರವಾಡ ಅವಳಿನಗರ ಮಾತ್ರವಲ್ಲದೆ, ಧಾರವಾಡ ಜಿಲ್ಲೆಯ ಮಹಿಳೆಯರೂ ಈ ಬಾರಿ ಒಂಬತ್ತು ದಿನವೂ ಒಂಬತ್ತು ರೀತಿಯಲ್ಲಿ ಸೀರೆ ಉಟ್ಟು ಮಿಂಚಿರುವುದು ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಪ್ರಾಯೋಜಕತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದೆ.

ಹೌದು... ಮಹಿಳೆಯರು ಒಂಬತ್ತು ದಿನವೂ ಒಂಬತ್ತು ಬಣ್ಣದ ಸೀರೆಯನ್ನು ತೊಟ್ಟು ಆಚರಣೆಯ ಪೋಟೋಗಳನ್ನು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಕಳಿಸಿದ್ದು, ಇದರಲ್ಲಿನ ವಿಜೇತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಇನ್ನೂ ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಪ್ರಾಯೋಜಕತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಿಂದ ಆಯೋಜಿಸಲಾಗಿದ್ದ ನವದುರ್ಗಾ ಸಂಭ್ರಮದಲ್ಲಿ ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ವತಿಯಿಂದ ಶೋಭಾ ಕಡತಾಳ, ವೀರೇಶ ಉಂಡಿಯವರ ಸಹೋದರಿ ಲಕ್ಷ್ಮೀ, ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರ ತಾಯಿ ಸುಜಾತಾ ಉಳ್ಳಾಗಡ್ಡಿಮಠ, ಪತ್ನಿ ಸುಶ್ಮಿತಾ ಉಳ್ಳಾಗಡ್ಡಿಮಠ ಹಾಗೂ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಪ್ರಧಾನ ಸಂಪಾದಕರಾದ‌ ಕೇಶವ ನಾಡಕರ್ಣಿಯವರು ವಿಜೇತರಿಗೆ ಬಹುಮಾನ ವಿತರಿಸಿದರು.

ಒಟ್ಟಿನಲ್ಲಿ ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಪ್ರಾಯೋಜಕತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ನೂರಾರು ಮಹಿಳೆಯರಿಗೆ ಪೂರಕ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕಾರ್ಯಕ್ರಮದ ನಿರೂಪಣೆ ಜೊತೆಗೆ ಜನರ ಅಂತರಾಳವನ್ನು ಅರಿಯುವಲ್ಲಿ ನಿರೂಪಕರಾದ ನಾಗರಾಜ ತಳುಗೇರಿ, ನಿರ್ಮಲಾ ಅರಳಿಕಟ್ಟಿ ಯಶಸ್ವಿಯಾಗಿದ್ದು, ಕಾರ್ಯಕ್ರಮಕ್ಕೆ ಮೆರುಗನ್ನು ತಂದಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/10/2024 09:01 pm

Cinque Terre

25.02 K

Cinque Terre

4

ಸಂಬಂಧಿತ ಸುದ್ದಿ