ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಜಾ ಸೇದಲು ಅಬಕಾರಿ ಇಲಾಖೆಗೆ ತೆರಳಿ ಮ್ಯಾಚ್‌ ಬಾಕ್ಸ್‌ ಕೇಳಿದ ಪಿಯುಸಿ ವಿದ್ಯಾರ್ಥಿಗಳು, ಆಮೆಲೇನಾಯ್ತು?

ತ್ರಿಶೂರ್‌ನ ಶಾಲೆಯೊಂದರ ಪಿಯುಸಿ ಮಕ್ಕಳು ಅಧ್ಯಯನ ಪ್ರವಾಸಕ್ಕಾಗಿ ಮುನ್ನಾರ್‌ಗೆ ತೆರಳಿದ್ದು ಈ ವೇಳೇ ಗಾಂಜಾ ಸೇದಿ ಸಿಕ್ಕಿಹಾಕಿಕೊಂಡಿರುವ ಪ್ರಸಂಗವೊಂದು ನಡೆಸಿದೆ.ನಿನ್ನೆ ಅಂದರೆ ಸೋಮವಾರ ನಾರ್ಕೋಟಿಕ್ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಕಚೇರಿ ಬಳಿಯಿದ್ದಂತಹ ಹೊಟೇಲ್‌ ನಲ್ಲಿ ಉಪಹಾರ ಸೇವಿಸಿ ನಂತರ ಹೊಟೇಲ್‌ ಹಿಂಭಾಗದಲ್ಲಿರುವ ಜಾಗದಲ್ಲಿ ಹತ್ತು ಮಂದಿ ಯುವಕರು ಸೇರಿಕೊಂಡು ಗಾಂಜಾ ಸೇದಲು ತೆರಳಿದ್ದಾರೆ.ಈ ವೇಳೆ ಬೀಡಿ ರೋಲ್‌ ಮಾಡಿದ್ದ ಗಾಂಜಾ ಸೇವಿಸಲು ಮ್ಯಾಚ್‌ ಬಾಕ್ಸ್‌ ಹುಡುಕಲು ಹೋಗಿ ಸಿಕ್ಕಾಕೊಂಡಿದ್ದಾರೆ.ಅಷ್ಟಕ್ಕೂ ಅವರು ಮ್ಯಾಚ್‌ ಬಾಕ್ಸ್‌ ಕೇಳಲು ಹೋಗಿದ್ದ ಆಫೀಸ್‌ ಯಾವುದು ಗೊತ್ತಾ? ಅಬಕಾರಿ ಇಲಾಖೆ.

ಯಸ್‌ ಇಲಾಖೆಯ ಹಿಂಭಾಗದಲ್ಲಿ ಸೀಸ್‌ ಮಾಡಿ ಇಟ್ಟ ವೆಹಿಕಲ್‌ ನೋಡಿ ಹುಡುಗರು ಯಾವುದೋ ಆಪೀಸ್‌ ಎಂದುಕೊಂಡು ಹಿಂಬಂದಿಯ ಡೋರ್‌ ನಿಂದ ಒಳಗೆ ಹೋಗಿ ಮ್ಯಾಚ್‌ ಬಾಕ್ಸ್‌ ಕೇಳಿದ್ದಾರೆ ಈ ವೇಳೆ ಆಫೀಸ್‌ ಒಳಗೆ ಯುನಿಫಾಂ ಹಾಕಿ ಕೂತಿದ್ದ ಕೆಲವು ಅಧಿಕಾರಿಗಳನ್ನು ನೋಡಿ ಹುಡುಗರು ಅಲ್ಲಿಂದ ಕಾಲು ಕಿತ್ತಿದ್ದಾರೆ, ಅನುಮಾನದಿಂದ ಹುಡುಗರ ಹಿಂದೆ ಓಡಿದ ಅಧಿಕಾರಿಗಳಿಗೆ ಗಾಂಜಾ ಸೇದುವ ವಿಚಾರ ತಿಳಿದು ಬಂದಿದೆ.ಅವರಲ್ಲಿ ಕೆಲವರು ಮೊದಲ ಬಾರಿ ಪ್ರಯತ್ನ ಮಾಡುತ್ತಿದ್ದರು ಎಂದು ಇನ್ಸ್ಪೆಕ್ಟರ್‌ ತಿಳಿಸಿದ್ದಾರೆ.ವಿದ್ಯಾರ್ಥಿಗಳಿಂದ 5 ಗ್ರಾಂ ಗಾಂಜಾ ಮತ್ತು ಒಂದು ಗ್ರಾಂ ಹಶಿಶ್ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ದ್ರವ್ಯ ಹೊಂದಿದ್ದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಶಾಲೆಯ ಅಧಿಕಾರಿಗಳಿಗೆ ವಿಷಯ ತಿಳಿಸಿ ವಿದ್ಯಾರ್ಥಿಗಳ ಪೋಷಕರನ್ನು ಮುನ್ನಾರ್‌ಗೆ ಕರೆಸಲಾಯಿತು. ಬಳಿಕ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಿ ಬಿಡುಗಡೆಗೊಳಿಸಿದರು.

Edited By : Somashekar
PublicNext

PublicNext

22/10/2024 08:15 pm

Cinque Terre

7.25 K

Cinque Terre

1

ಸಂಬಂಧಿತ ಸುದ್ದಿ