ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಬೌಗೆನ್ವಿಲ್ಲಾ ರಿಲೀಸ್‌, ಸಿನಿಮಾ ತಬ್ಬಿಕೊಂಡ ಮಾಲಿವುಡ್‌ ಮಂದಿ

ಮಾಲಿವುಡ್ ಚಿತ್ರಪ್ರೇಮಿಗಳು ಮನಃಪೂರ್ವಕವಾಗಿ ಒಪ್ಪಿಕೊಂಡಿರುವ ಚಿತ್ರ ಅಮಲ್ ನೀರದ್ ನಿರ್ದೇಶನದ ಬೌಗೆನ್ವಿಲ್ಲಾ. ಇದೊಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ. ಕೇರಳದಲ್ಲಿ ಪ್ರವಾಸಿಗರ ನಿಗೂಢ ನಾಪತ್ತೆಯ ಸುತ್ತ ಪೊಲೀಸ್ ತನಿಖೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಒಂದು ಕುಟುಂಬದ ಸುತ್ತ ಸುತ್ತುವ ಕಥೆಯಾಗಿದೆ. ಮೊದಲ ವಾರಾಂತ್ಯದಲ್ಲಿ ಪ್ರಪಂಚದಾದ್ಯಂತ ಈ ಸಿನಿಮಾ 26 ಕೋಟಿ ರೂ ಸಂಗ್ರಹಿಸಿದೆ.ಚಿತ್ರದಲ್ಲಿ ಫಹಾದ್ ಫಾಸಿಲ್,ಜ್ಯೋತಿರ್ಮಯಿ, ಕುಂಚಾಕೊ ಬೋಬನ್ ನಟಿಸಿದ್ದಾರೆ.ಮಾಲಿವುಡ್ ಇಂಡಸ್ಟ್ರಿ ಈ ವರ್ಷ ಒಳ್ಳೆಯ ಸಿನಿಮಾಗಳನ್ನು ನೀಡಿದೆ.ಪ್ರೇಮಲು, ಮಂಜುಮ್ಮೆಲ್ ಬಾಯ್ಸ್, ಆಡುಜೀವಿತಂ, ಆವೇಶಂ, ARM, ಕಿಷ್ಕಿಂಧಾ ಕಾಂಡಂ ಮತ್ತು ಕೆಲವು ಇತರ ಚಲನಚಿತ್ರಗಳು ಸೂಪರ್-ಹಿಟ್ ವ್ಯವಹಾರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಬೌಗೆನ್ವಿಲ್ಲಾ ಮುಂದಿನ ಒಂದೆರಡು ವಾರದಲ್ಲಿ ಈ ಹಿಟ್‌ ಲಿಸ್ಟ್‌ ಸೇರಲಿದೆ. ಇದು ಜೋಸ್ ಅವರ 2019 ರ ಕಾದಂಬರಿ ರುತಿಂತೆ ಲೋಕಮ್‌ನಿಂದ ಸ್ಫೂರ್ತಿ ಪಡೆದು ಚಿತ್ರ ಕಥೆ ಬರೆಯಲಾಗಿದೆ.ಸಸ್ಪೆನ್ಸ್‌ ಜಾನರ್‌ ಇಷ್ಟ ಪಡುವ ಮಂದಿ ಹತ್ತಿರದ ಥಿಯೇಟರ್‌ ಗೆ ಹೋಗಿ ಈ ಸಿನಿಮಾ ತಪ್ಪದೇ ನೋಡಿ.

Edited By : Somashekar
PublicNext

PublicNext

22/10/2024 08:14 pm

Cinque Terre

9.98 K

Cinque Terre

0