ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂರು ವರ್ಷಗಳ ನಂತರ ಅಬ್ಬರಿಸಲು ರೆಡಿಯಾದ ಶ್ರೀ ಮುರುಳಿ, ಬಘೀರನಾಗಿ ದುಷ್ಟರ ಸಂಹಾರಕ್ಕೆ ರೆಡಿ

ಡಾ ಸೂರಿ ನಿರ್ದೇಶನದ ಶ್ರೀ ಮುರುಳಿ ಅಭಿನಯದ ʼಬಘೀರʼ ಸಿನಿಮಾ ಇದೇ ಅ.೩೧ ರಂದು ರಿಲೀಸ್‌ ಆಗಲಿದೆ.ಮೊದಲು ಈ ಸಿನಿಮಾ ಪ್ಯಾನ್‌ ಇಂಡಿಯಾವಾಗಿ ಮೂಡಿ ಬರಲಿದೆ ಎನ್ನಲಾಗುತ್ತಿತ್ತು,ಆದರೆ ತಿಂಗಳ ಕೊನೆಯಲ್ಲಿ ಸಾಲು ಸಾಲು ಹಿಂದಿ ಸಿನಿಮಾಗಳಾದ ಭೂಲ್‌ ಬುಲಯ್ಯಾ,ಸಿಂಗಂ ರಿಲೀಸ್‌ ಆಗುತ್ತಲಿರುವುದರಿಂದ ಸಮ್ನೆ ಥಿಯೇಟರ್‌ ಸಿಗದೇ ಒದ್ದಾಡುವ ಬದಲಾಗಿ ಕನ್ನಡ ಮತ್ತು ತೆಲುಗುವಿನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿರುವುದಾಗಿ ಸೂರಿ ಹೇಳಿಕೊಂಡಿದ್ದಾರೆ.ಸಿನಿಮಾದಲ್ಲಿ ಸೂಪರ್‌ ಹೀರೋನಾಗಿ ಶ್ರೀ ಮುರುಳಿ ನಟಿಸಿದ್ದು, ಇದು ಇವರ ಡ್ರೀಮ್‌ ರೋಲ್‌ ಅಂತೆ,ಚಿಕ್ಕವಯಸ್ಸಿನಿಂದಲೂ ಬ್ಯಾಟ್‌ ಮ್ಯಾನ್‌,ಐರನ್‌ ಮ್ಯಾನ್‌,ಸ್ಪೈಡರ್‌ ಮ್ಯಾನ್‌,ಸೂಪರ್‌ ಮ್ಯಾನ್‌ ರೋಲ್‌ ನೋಡಿ ನಾನು ಒಂದು ದಿನ ಹೀಗೆ ಆಗ್ಬೇಕು ಅಂದುಕೊಳ್ಳುತ್ತಿದೆ.ಕೊನೆಗೂ ಈ ಸಿನಿಮಾದ ಮೂಲಕ ಸೂಪರ್‌ ಹೀರೋ ಆಗುತ್ತಿದ್ದೇನೆ ಹಾಗೂ ದೇಹ ದಂಡಿಸಿ ಪಾತ್ರಕ್ಕೆ ಬೇಕಾದ ಹಾಗೆ ರೆಡಿಯಾಗಿದ್ದೇನೆ ಅಂದಿದ್ದಾರೆ.

ನಿಷ್ಠಾವಂತ ಪೊಲೀಸ್‌ ಆಫೀಸರ್‌ ಒಬ್ಬ ಕರಿಚಿರತೆಯಂತೆ ರಾತ್ರಿಯ ಹೊತ್ತು ದುಷ್ಟರನ್ನು ಸಂಹರಿಸುವುದೇ ಈ ಸಿನಿಮಾದ ಥ್ರೆಡ್‌. ಕ್ರಿಮಿನಲ್ಸ್‌ ಸದೆ ಬಡಿಯುವ ಬಘೀರನಿಗೆ ಜನ ಎಷ್ಟು ಮಾರ್ಕ್ಸ್‌ ಕೊಡ್ತಾರೆ ಕಾದು ನೋಡೋಣ.

Edited By : Somashekar
PublicNext

PublicNext

22/10/2024 08:00 pm

Cinque Terre

8.81 K

Cinque Terre

0