ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜೋಶಿಯವರು ಬಿಜೆಪಿಗೆ ಬಿಟ್ಟು ಕೊಡಿ ಅಂದ್ರು ನಡ್ಡಾ ಜೆಡಿಎಸ್ ಚಿಹ್ನೆಯಡಿ ನಿಲ್ಲಲಿ ಎಂದಿದ್ದಾರೆ ಎಂದ HDK

ಬೆಂಗಳೂರು : ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತು ಇನ್ನೂ ಮುಂದುವರೆದಿದೆ. ಚನ್ನಪಟ್ಟಣ ಟಿಕೆಟ್ ಆಯ್ಕೆ ಸಂಬಂಧ ಇವತ್ತು ದೇವೆಗೌಡರು ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಚನ್ನಪಟ್ಟಣ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಜೆಪಿ ಭವನದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಬಹುತೇಕ ಮುಖಂಡರು ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಎಂದರು. ಇನ್ನೂ ಮೂರು ದಿನಗಳಲ್ಲಿ ತೀರ್ಮಾನ ಮಾಡುವುದು ಎಂದಿದ್ದಾರೆ.

ಇವತ್ತಿನ ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರುಗಳ ಭಾವನೆ ಅರಿತುಕೊಂಡಿದ್ದೇನೆ, ಸ್ಥಳೀಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನು ಮೂರು ದಿನ ಸಮಯವಿದೆ ನೋಡೋಣ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ನನಗೆ ಮೂರು ದಿನಗಳ ಹಿಂದೆಯೆ ಮಾತಾಡಿದ್ದಾರೆ, ಅವರು ನನ್ನ ಮುಂದೆ ಒಂದು ಪ್ರಪೋಸ್ ಇಟ್ಟಿದ್ರು. ಸಿಪಿ ಯೋಗೇಶ್ವರ್ ಅವರಿಗೆ ಜೆಡಿಎಸ್ ನಿಂದಲೆ ಬಿ ಫಾರಂ ಕೊಡಿ ಎಂದಿದ್ರು. ಅವರು ಮಾತಿಗೆ ಗೌರವ ಕೊಡಲು ನಾವು ತಯಾರಾಗಿದ್ವು. ಆದ್ರೆ ಮೊದಲು ಯಾವ ಪಕ್ಷದಿಂದ ಕೊಟ್ರು ನಿಲ್ತಿನಿ ಅಂತ ಅಂದಿದ್ರು. ಆದ್ರೆ ಈಗ ಎಸ್ ಪಿ ಬಿಎಸ್ ಪಿ ಅಂತಿದ್ದಾರೆ ಎಂದರು.

ಪ್ರಹ್ಲಾದ ಜೊಶಿ ಕಾಲ್ ಮಾಡಿ ಬಿಜೆಪಿಗೆ ಬಿಟ್ಟು ಕೊಡಿ ಅಂದ್ರು, ನಡ್ಡಾ ಅವರೆ ಫೋನ್‌ಮಾಡಿ ಜೆಡಿಎಸ್ ನಿಂದ ಅಭ್ಯರ್ಥಿ ನಿಲ್ಲಲಿ ಅಂತಾ ಹೇಳಿದ್ದಾರೆ. ನೋಡೊಣಾ ಏನಾಗುತ್ತೆ ಎಂದು ಹೇಳುವ ಮೂಲಕ ಚನ್ನಪಟ್ಟಣ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ ಎಂಬ ಸಂದೇಶ ಕೊಟ್ಟು ತೆರಳಿದ್ದಾರೆ.

Edited By : Suman K
PublicNext

PublicNext

22/10/2024 07:51 pm

Cinque Terre

6.64 K

Cinque Terre

0

ಸಂಬಂಧಿತ ಸುದ್ದಿ