ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಸತತ ಮಳೆ, ದಾಳಿಂಬೆ ಬೆಳೆಗೆ ಕಪ್ಪುಚುಕ್ಕೆ ರೋಗ ಬೆಳಗಾರರಿಗೆ ಬರಸಿಡಿಲು

ಹೊಸದುರ್ಗ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಾಲ್ಲೂಕಿನ ರೈತರು ಬೆಳೆದಿರುವ ದಾಳಿಂಬೆ ಬೆಳೆಗೆ ಕಪ್ಪುಚುಕ್ಕೆ ರೋಗ ಲಕ್ಷಣಗಳು ಆವರಿಸಿದ್ದು, ರೈತರಲ್ಲಿ ಆತಂಕ ಶುರುವಾಗಿದೆ.

ಉತ್ತಮ ಆದಾಯ ಪಡೆಯುವ ನಿರೀಕ್ಷೆಯಿಂದ ರೈತರು ದಾಳಿಂಬೆಯತ್ತ ಒಲವು ತೋರಿದ್ದರು.ಫೆಬ್ರುವರಿಯಿಂದ ಫಸಲಿಗೆ ಬಿಟ್ಟಿದ್ದ ದಾಳಿಂಬೆಗಳಿಗೆ ಚಿಬ್ಬುರೋಗ (ಕಪ್ಪು ಚುಕ್ಕೆರೋಗ) ಹರಡಿದೆ. ರೋಗಕ್ಕೆ ತುತ್ತಾದ ದಾಳಿಂಬೆ ನೆಲಕ್ಕುರುಳುತ್ತಿವೆ.3 ವರ್ಷಗಳ ಹಿಂದೆ 2 ಎಕರೆಯಲ್ಲಿ ದಾಳಿಂಬೆ ಹಾಕಲಾಗಿತ್ತು. ದಾಳಿಂಬೆ ಉತ್ಕೃಷ್ಟವಾಗಿ ಬೆಳೆಯುವ ಹಂತದಲ್ಲಿದ್ದು, ಕಳೆದ ವರ್ಷ ಉಂಟಾದ ಬರಗಾಲದಿಂದ, ದಾಳಿಂಬೆ ಗಿಡ ಒಣಗಿದಂತಾದವು.

ಆದರೀಗ ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಅಧಿಕವಾಗಿದೆ. ಇದುವರೆಗೂ ₹ 6 ಲಕ್ಷ ವ್ಯಯಿಸಿದ್ದು, ಆದಾಯ ದೊರೆತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಮಧ್ಯೆ ಸಿಲುಕಿ ಪರಿತಪಿಸುವಂತಾಗಿದೆ.

Edited By : PublicNext Desk
Kshetra Samachara

Kshetra Samachara

22/10/2024 03:45 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ