ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೆಫ್‌ ಆಗಿ ಬದಲಾದ ಟ್ರಂಪ್‌, ಫ್ರೆಂಚ್ ಫ್ರೈ ಮಾಡಿ ಹ್ಯಾರಿಸ್‌ ಗೆ ವ್ಯಂಗ್ಯ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ಬಿರುಸಿನ ಪ್ರಚಾರದಲ್ಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಿನ್ನೆ ಪೆನ್ಸಿಲ್ವೇನಿಯಾದಲ್ಲಿ ಜನರ ಅಟೆಂನ್ಷನ್‌ ಗ್ರ್ಯಾಬ್‌ ಮಾಡಲು ಮಾಡಿರುವ ಕಸರತ್ತು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.ನಿನ್ನೆ ಮೆಕ್‌ಡೊನಾಲ್ಡ್‌ಗೆ ಭೇಟಿ ನೀಡಿದ ಟ್ರಂಪ್‌ ಗ್ರಾಹಕರಿಗೆ ಫ್ರೆಂಚ್ ಫ್ರೈಗಳನ್ನು ಮಾಡಿ ಸಪ್ಲೈ ಮಾಡಿದ್ದಾರೆ.78ರ ಹರೆಯದ ಮಾಜಿ ಅಧ್ಯಕ್ಷರಾದ ಟ್ರಂಪ್‌ ಗೆ ಡೆಮೋಕ್ರಾಟ್ ಪಕ್ಷದ ಕಮಲಾ ಹ್ಯಾರಿಸ್ ಪ್ರತಿ ಸ್ಪರ್ಧಿಯಾಗಿದ್ದಾರೆ.ಬಿಳಿ ಶರ್ಟ್ ಗೆ ಕೆಂಪು ಟೈ ಹಾಕಿ ಏಪ್ರಾನ್‌ ಹಾಕಿ ಅಡುಗೆ ಮನೆಯಲ್ಲಿ ಸಿಬ್ಬಂದಿಗಳ ಜೊತೆ ವ್ಯವಹರಿಸುತ್ತಾ ಚಿಪ್ಸ್‌ ಪ್ರೈ ಮಾಡಿ ಶೆಫ್‌ ಆಗಿ ಬದಲಾಗಿದ್ದರು ಟ್ರಂಪ್. "ನಾನು ಯಾವಾಗಲೂ ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡಲು ಬಯಸುತ್ತಿದೆ,ಈ ಕೆಲಸ ನನಗೆ ಮೋಜು ಕೊಡುತ್ತದೆ" ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಅಮೇರಿಕಾದ ಮಾಜಿ ಪ್ರೆಸಿಡೆಂಟ್‌ ಬರಾಕ್‌ ಒಬಾಮ ಹಿಂದೊಮ್ಮೆ ಕಮಲಾ ಹ್ಯಾರಿಸ್‌ ಬಗ್ಗೆ ಮಾತನಾಡುತ್ತಾ, ಆಕೆ ಈಗ ಎಷ್ಟೇ ಬಿಲಿಯನೇರ್‌ ಆಗಿದ್ರೂ ಯೌವ್ವನದ ದಿನಗಳಲ್ಲಿ ಮೆಕ್‌ಡೊನಾಲ್ಡ್‌ ನಲ್ಲಿ ಕೆಲಸ ಮಾಡಿದ್ದರು ಎಂದು ಹೇಳಿದ್ದರು, ಇದೀಗ ವ್ಯಂಗ್ಯ ಮಾಡುವ ರೀತಿಯಲ್ಲಿ ಟ್ರಂಪ್‌ ಮೆಕ್‌ಡೊನಾಲ್ಡ್‌ ಅಲ್ಲಿ ಫ್ರೆಂಚ್‌ ಪ್ರೈ ಮಾಡಿದ್ದಾರೆ.

Edited By : Somashekar
PublicNext

PublicNext

21/10/2024 07:54 pm

Cinque Terre

28.95 K

Cinque Terre

0

ಸಂಬಂಧಿತ ಸುದ್ದಿ