ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲಸ ಹೋಗಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಚಾಣಾಕ್ಷತನದಿಂದ ರಕ್ಷಿಸಿದ ಜನ.!

ನವದೆಹಲಿ: ಇತ್ತೀಚೆಗೆ ಕೆಲಸದಿಂದ ವಜಾಗೊಂಡ ವ್ಯಕ್ತಿಯೊಬ್ಬರು ವಸತಿ ಕಟ್ಟಡದ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನೋಯ್ಡಾದಲ್ಲಿ ನಡೆದಿದೆ. ಈ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ವಿಡಿಯೋದಲ್ಲಿ ವ್ಯಕ್ತಿ ವಸತಿ ಕಟ್ಟಡದ 12ನೇ ಮಹಡಿಯ ಸಾಮಾನ್ಯ ಮೆಟ್ಟಿಲುಗಳ ಪಕ್ಕದಲ್ಲಿರುವ ಬಾಲ್ಕನಿಯಿಂದ ಹಾರಲು ಮುಂದಾಗಿದ್ದ. ಇದನ್ನು ಕಂಡ ವಸತಿ ಕಟ್ಟಡದ ಕೆಲ ನಿವಾಸಿಗಳು ಚೀರಾಟ ಆರಂಭಿಸಿದ್ದಾರೆ. ಈ ವೇಳೆ ಅಲ್ಲಿಗೆ ದೌಡಾಯಿಸಿದ ಕಟ್ಟಡದ ಕೆಲ ನಿವಾಸಿಗಳು ವ್ಯಕ್ತಿಯನ್ನು ಹಿಡಿದು ಹೊರಗೆ ಮೇಲಕ್ಕೆ ಎತ್ತಿಕೊಂಡು ಆತ್ಮಹತ್ಯೆಯಿಂದ ಪಾರು ಮಾಡಿದ್ದಾರೆ.

Edited By : Vijay Kumar
PublicNext

PublicNext

21/10/2024 06:16 pm

Cinque Terre

26.3 K

Cinque Terre

1