ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ಟೋಬರ್ 23ಕ್ಕೆ ಒಡಿಶಾ - ಪಶ್ಚಿಮ ಬಂಗಾಳ ತೀರಕ್ಕೆ ಅಪ್ಪಳಿಸಲಿದೆ ಚಂಡಮಾರುತ : IMD ಎಚ್ಚರಿಕೆ

ಭುವನೇಶ್ವರ: ಮುಂಗಾರು ಮಳೆ ಋತುವಿನ ನಂತರ ಮೊದಲ ಉಷ್ಣವಲಯದ ಚಂಡಮಾರುತವು ಇದೇ ಅಕ್ಟೋಬರ್ 23ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ತಿಳಿಸಿದೆ.

ಕೇಂದ್ರ ಅಂಡಮಾನ್ ಸಮುದ್ರದ ಮೇಲಿನ ಗಾಳಿಯ ಚಂಡಮಾರುತವು ಭಾನುವಾರ ಉತ್ತರ ಅಂಡಮಾನ್ ಸಮುದ್ರಕ್ಕೆ ಚಲಿಸಿದೆ. ಇದರ ಪ್ರಭಾವದಿಂದ ಮುಂದಿನ 24 ಗಂಟೆಗಳಲ್ಲಿ ಪೂರ್ವ - ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ.

ಈ ವ್ಯವಸ್ಥೆಯು ಪಶ್ಚಿಮ - ವಾಯುವ್ಯದ ಕಡೆಗೆ ಚಲಿಸುವ ನಿರೀಕ್ಷೆಯಿದೆ. ಅಕ್ಟೋಬರ್ 22 ರ ಬೆಳಗ್ಗೆ ವಾಯುಭಾರ ಕುಸಿತ ತೀವ್ರಗೊಳ್ಳುತ್ತದೆ. 23ರಂದು ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತವಾಗಿ ಪರಿಣಮಿಸುತ್ತದೆ. ಅದರ ನಂತರ, ಅದು ವಾಯುವ್ಯಕ್ಕೆ ಚಲಿಸುತ್ತದೆ. ಅಕ್ಟೋಬರ್ 24 ರ ಬೆಳಗ್ಗೆ ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ. ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 120 ಕಿ.ಮೀ ತಲುಪುತ್ತದೆ. ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡು ವಾಯುಭಾರ ಕುಸಿತವಾಗಿ ಬಲಗೊಂಡ ನಂತರ ಹೆಚ್ಚು ಸ್ಪಷ್ಟವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಡಾ.ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/10/2024 08:32 am

Cinque Terre

45.51 K

Cinque Terre

0