ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ನೆತನ್ಯಾಹು ಹತ್ಯೆಗೆ ಡ್ರೋನ್ ದಾಳಿ - ಕಾರ್ಯತಂತ್ರ ಫೇಲ್ ಮಾಡಿದ ಇಸ್ರೇಲ್ ಭದ್ರತಾ ಪಡೆ

ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನೆ ಮೇಲೆ ಡ್ರೋನ್ ದಾಳಿ ಮೂಲಕ ನೆತನ್ಯಾಹು ಹತ್ಯಗೆ ಯತ್ನಿಸಿದ ಹೆಜ್ಬುಲ್ಲಾ ಉಗ್ರರ ಪಡೆಯನ್ನು ಇಸ್ರೇಲ್ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದೆ. ಈ ಮೂಲಕ ದಾಳಿ ಯತ್ನ ವಿಫಲವಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು ಗುರಿಯಾಗಿಸಿಕೊಂಡು ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದೆ. ಪ್ರಧಾನಿ ನೆತನ್ಯಾಹು ಅವರ ಖಾಸಗಿ ನಿವಾಸವಿರುವ ಹೈಫಾದ ಸಿಸೇರಿಯಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಲೆಬನಾನ್‌ನಿಂದ ಉಡಾವಣೆಯಾದ ಡ್ರೋನ್ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲಿ ಸೇನೆ (ಐಡಿಎಫ್) ಹೇಳಿದೆ. ಜೆರುಸಲೆಮ್ ಪೋಸ್ಟ್ ವರದಿಯ ಪ್ರಕಾರ, ಸಿಸೇರಿಯಾದಲ್ಲಿ ಡ್ರೋನ್ ದಾಳಿಯ ಸಮಯದಲ್ಲಿ ಟೆಲ್ ಅವಿವ್‌ನಲ್ಲಿ ಸೈರನ್‌ಗಳ ಶಬ್ದವೂ ಕೇಳಿಸಿದೆ.

Edited By : Nagaraj Tulugeri
PublicNext

PublicNext

19/10/2024 10:02 pm

Cinque Terre

50.69 K

Cinque Terre

0

ಸಂಬಂಧಿತ ಸುದ್ದಿ