ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡುವ ಹಣ ರಾಷ್ಟ್ರೀಕೃತ ಬ್ಯಾಂಕ್‌ನದ್ದು - ದೇವಸ್ಥಾನದ ಹುಂಡಿ ಹಣವಲ್ಲ

ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲ್ಲೂಕು ಮತ್ತು ಬ್ಯಾಂಕ್ ಆಫ್ ಬರೋಡ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಭಾನುವಾರ ಬ್ರಹ್ಮಾವರ ನಾರಾಯಣಗುರು ಸಭಾಭವನದಲ್ಲಿ ಜರುಗಿತು.

ಈ ಸಂದರ್ಭ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಹಲವಾರು ಸೇವಾ ಕೇಂದ್ರದ ಮತ್ತು ಕಾರ್ಯಕರ್ತರ ಮೂಲಕ ಜನರ ಆರ್ಥಿಕ ಪ್ರಗತಿಗೆ ನೆರವು ನೀಡುವ ಸಂಸ್ಥೆಯಾಗಿದ್ದು ಇದರ ಎಲ್ಲಾ ಹೊಣೆ ಹಲವಾರು ರಾಷ್ಟ್ರೀಕೃತ ಬ್ಯಾಂಕ ಮೂಲಕ ನೀಡಲಾಗುತ್ತ್ತಿದೆ ಅದರ ಮೂಲಕನೀಡುವ ಹಣ ಬ್ಯಾಂಕ್‌ನದ್ದು ಹೊರತಾಗಿ ದೇವಸ್ಥಾನದಹುಂಡಿ ಹಣ ಅಲ್ಲವೇ ಅಲ್ಲ ಎಂದರು.

ಅತಿಥಿ ಬ್ಯಾಂಕ್ ಆಫ್ ಬರೋಡಾ ಬ್ರಹ್ಮಾವರ ಶಾಖೆಯ ಸಕಾರಾಮ್ ಮಾತನಾಡಿ ಸ್ವಸಹಾಯ ಸಂಘಗಳು, ಎಸ್.ಕೆ.ಡಿ.ಆರ್.ಪಿ ನಿರ್ವಹಿಸುತ್ತಿರುವ ಜವಾಬ್ದಾರಿಗಳ ಬಗ್ಗೆ,ಸಾಲ ಪಡೆದವರು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡದಲ್ಲಿ ಮುಂದೆ ಎಲ್ಲೂ ಸಾಲಸಿಗದಂತೆ ಆಗುವ ಸಿಭಿಲ್ ಕುರಿತು ಮಾತನಾಡಿದರು.

ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ಪ್ರಕಾಶ ಶೆಟ್ಟಿ, ಬ್ರಹ್ಮಾವರ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ, ಎಂ.ಆರ್.ಎಸ್ ಯೋಜನಾಧಿಕಾರಿ ಸ್ವಪ್ನ, ಜನಜಾಗ್ರತಿ ವೇದಿಕೆಯ ರಾಜೀವ ಕುಲಾಲ್, ಯೋಜನೆಯ ವಲಯಾಧ್ಯಕ್ಷರುಗಳಾದ ದಿನೇಶ, ಪುರುಷೋತ್ತಮ, ಚಂದ್ರ ಮರಕಾಲ, ರಮೇಶ ಕೊಕ್ಕರ್ಣೆ, ಶೌರ್ಯ ಟೀಮ್‌ನ ಮಂಜುನಾಥ ಬಾರಕೂರು ವೇದಿಕೆಯಲ್ಲಿ ಉಪಸ್ಥಿತದ್ದರು.

Edited By : Vinayak Patil
Kshetra Samachara

Kshetra Samachara

21/10/2024 03:54 pm

Cinque Terre

6.28 K

Cinque Terre

0

ಸಂಬಂಧಿತ ಸುದ್ದಿ