ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಯುರ್ವೇದ ಜ್ಞಾನ ನೀಡಲು ಉಜ್ಬೇಕಿಸ್ಥಾನ್‌ಗೆ ಹೊರಟ ಆಯುರ್ವೇದ ತಜ್ಞ ದಂಪತಿಗೆ ಶುಭ ಹಾರೈಕೆ

ಆರೋಗ್ಯವೇ ಭಾಗ್ಯ ಎನ್ನುವುದು ಈ ದೇಶ, ಪರದೇಶವೆನ್ನದೆ ಎಲ್ಲರಿಗೂ ತಿಳಿದ ವಿಷಯ. ಆದರೆ ಇದರ ಗುಟ್ಟು ಯಾವ ಮಾರ್ಗದಲ್ಲಿದೆ ಎಂದು ತಿಳಿದಿರುವುದು ಭಾರತೀಯರ ಸೌಭಾಗ್ಯವೇ ಸರಿ. ಅದೇ "ಆಯುರ್ವೇದ" ಎನ್ನುವ ರತ್ನಗರ್ಭಿತ ಶಾಸ್ತ್ರ.

ದೀಪದ ಬುಡ ಕತ್ತಲೆ ಎಂಬಂತೆ ನಮ್ಮೂರಿನವರಲ್ಲಿ ಆಯುರ್ವೇದದ ಪ್ರಾಮುಖ್ಯತೆಯ ಅರಿವು ಸ್ವಲ್ಪ ಕಡಿಮೆಯೇ. ಆದರೂ ಉಜ್ಬೇಕಿಸ್ಥಾನ್ ದೇಶದವರಿಗೆ ಆಯುರ್ವೇದ ಶಾಸ್ತ್ರದ ಅರಿವು ಆರೋಗ್ಯಕರ ಜನಜೀವನಕ್ಕೆ ಬೇಕು ಎಂಬ ಪರಿವು ಉಂಟಾಗಿದೆ. ಹೀಗಾಗಿ ನಮ್ಮ ನೀಲಗಂಗಾ ಆಯುರ್ವೇದ ಸಂಸ್ಥೆಯಲ್ಲಿ ಆ ದೇಶದ ಜನರು ತಮಗೆ ಅನುಕೂಲವಾಗುವಂತೆ ಆಯುರ್ವೇದ ಜೀವನ ಪದ್ಧತಿ, ಔಷಧ ಇತ್ಯಾದಿಗಳ ಹೆಚ್ಚಿನ ಜ್ಞಾನಕ್ಕಾಗಿ ವಿನಂತಿಸಿಕೊಂಡಿದ್ದಾರೆ. ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿತಾ ಮಹಾಜನ್ ಮತ್ತು ಕಾರ್ಯದರ್ಶಿಗಳು ಡಾ. ಶಂಕರಗೌಡ ಈ ಆಯುರ್ವೇದ ತಜ್ಞ ದಂಪತಿಯು ಆಯುರ್ವೇದ ಶಾಸ್ತ್ರವನ್ನು ಪ್ರಪಂಚದಾದ್ಯಂತ ಪ್ರಸರಿಸಬೇಕು ಮತ್ತು ಯಾವ ದೇಶವೂ ಕೊರೊನಾದಂತಹ ಇತ್ಯಾದಿ ಮಹಾಮಾರಿ ರೋಗಗಳಿಗೆ ಗುರಿಯಾಗಬಾರದೆಂಬ ಸತ್ಸಂಕಲ್ಪದೊಟ್ಟಿಗೆ ಉಜ್ಬೇಕಿಸ್ಥಾನ್ ಪ್ರವಾಸಗೈಯ್ಯುತ್ತಿದ್ದಾರೆ. ಅವರಿಗೆ ಶುಭ ಹಾರೈಕೆಗಳು.

ಶುಭ ಹಾರೈಸುವವರು: ನರಗುಂದದ ರವಿ ಹುಂಬಿ, ಈಶ್ವರ ಗೋವೇಶ್ವರ, ಡಾ.ಪ್ರಭು ನಂದಿ, ಯೋಗೀಶ್ ಪಾಟೀಲ್, ಮಹೇಶ ಪಾಟೀಲ್, ನಾಗೇಶ ಅಪ್ಪೋಜಿ, ವಿಜಯ್ ಬಿರಾದಾರ್ ಹಾಗೂ ಗೆಳೆಯರು.

Edited By : Shivu K
PublicNext

PublicNext

21/10/2024 10:55 am

Cinque Terre

31.57 K

Cinque Terre

0

ಸಂಬಂಧಿತ ಸುದ್ದಿ