ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದ ಟಾಪ್‌ 10 ಕಾಫಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದ ದಕ್ಷಿಣ ಭಾರತದ ಫಿಲ್ಟರ್‌ ಕಾಫಿ

ದಕ್ಷಿಣ ಭಾರತದ ಫಿಲ್ಟರ್‌ ಕಾಫಿ ವಿಶ್ವದಾದ್ಯಂತದ ಟಾಪ್ 10 ಕಾಫಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.ಪ್ರತಿ ಮನೆ ಮನೆಗಳಲ್ಲೂ ತಯಾರಾಗುವ ಫಿಲ್ಟರ್‌ ಕಾಫಿ ಈಗ ಜಗತ್ತಿಗೆ ಸೆಕೆಂಡ್‌ ಪ್ಲೇಸ್‌ ಪಡೆದಿದ್ದು ನಮಗೆಲ್ಲರಿಗೂ ಖುಷಿಯ ವಿಷಯ.ಇದರ ಬ್ರೂಯಿಂಗ್‌ ಹಾಗೂ ಘಮ ಘಮಿಸುವ ಸುವಾಸನೆಯಿಂದಾಗಿ ಫಿಲ್ಟರ್‌ ಕಾಫಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.ಈ ಕಾಫಿ ತಯಾರಿಸುವ ವಿಧಾನ ನಿಮಗೆಲ್ಲಾ ಗೊತ್ತೇ ಇದೆ ಅಲ್ವಾ ಸ್ಟೇನ್‌ಲೆಸ್ ಸ್ಟೀಲ್ ಫಿಲ್ಟರ್ ಯಂತ್ರವನ್ನು ಬಳಸಿ ರುಚಿರುಚಿಯಾದ ಕಾಫಿ ತಯಾರು ಮಾಡಲಾಗುತ್ತೆ.ರಾತ್ರಿ ಫಿಲ್ಟರ್‌ ತಯಾರಿಸಿ ಬೆಳಗ್ಗೆ ತಾಜಾ ಬ್ರ್ಯೂ ಅನ್ನು ಮಾಡಲಾಗುತ್ತದೆ.ಅಂತರಾಷ್ಟ್ರೀಯ ಕಾಫಿಗಳಾದ ಗ್ರೀಸ್‌ನ ಎಸ್ಪ್ರೆಸೊ ಫ್ರೆಡ್ಡೊ, ಇಟಾಲಿಯನ್ ಕ್ಯಾಪುಸಿನೊ ಮತ್ತು ಟರ್ಕಿಶ್ ಕಾಫಿಯಂತಹ ಇತರ ಕಾಫಿಗಳೊಂದಿಗೆ ಫಿಲ್ಟರ್‌ ಕಾಫಿ ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ.

Edited By : Somashekar
PublicNext

PublicNext

18/10/2024 07:21 pm

Cinque Terre

44.61 K

Cinque Terre

0

ಸಂಬಂಧಿತ ಸುದ್ದಿ