ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೋರ್ವನು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಸ್ಸಾಂ ಮೂಲದ ಸಮನ್ ಅಲಿ(24) ಮೃತಪಟ್ಟ ಯುವಕ.

ಮಂಗಳೂರಿನ ಎಂಆರ್‌ಪಿಎಲ್, ಎಂಎಸ್‌ಇಝಡ್ ಮತ್ತು ಇತರ ಕಂಪೆನಿಗಳಿಗೆ ಭದ್ರತೆಯನ್ನು ನೋಡಿಕೊಂಡಿರುವ ಭವಾನಿ ಸೆಕ್ಯೂರಿಟಿ (BSNP)ಯಲ್ಲಿ ಸಮನ್ ಅಲಿ ಸುಮಾರು 7ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದನು. ಅಕ್ಟೋಬರ್ 17ರಂದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಸಮನ್ ಅಲಿ ಸ್ಥಳದಿಂದ ನಾಪತ್ತೆಯಾಗಿದ್ದ‌.

ಈತನ ಮೃತದೇಹ ಪೆರ್ಮುದೆ ಗ್ರಾಮದ ಎಂಆರ್‌ಪಿಎಲ್ ಅ್ಯರೋಮ್ಯಾಟಿಕ್ ಕಾಂಪ್ಲೆಕ್ಸ್ ಬಳಿ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

Edited By : Nirmala Aralikatti
Kshetra Samachara

Kshetra Samachara

20/10/2024 10:21 pm

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ