ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಸ್ವರ್ಣ ನದಿಯಲ್ಲಿ ಪತ್ತೆ

ಬ್ರಹ್ಮಾವರ: ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ.

ಮೃತ ವ್ಯಕ್ತಿ ಸುಮನೇಶ್ ಹೆಗ್ಡೆ (42) ಮಧ್ವನಗರ ಮೂಡಬೆಟ್ಟು ನಿವಾಸಿಯಾಗಿದ್ದಾರೆ. ಇವರು ವಿವಾಹಿತರಾಗಿದ್ದು, ಖಾಸಗಿ ಬಸ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮನೆಯಿಂದ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರೆಂದು ತಿಳಿದುಬಂದಿದೆ. ಇವರು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇವರು ಮೃತದೇಹವು ನದಿಯಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿದ ಮಾಜಿ ನಗರಸಭೆ ಸದಸ್ಯ ಚಿನ್ಮಯಮೂರ್ತಿ ಮತ್ತು ಅವರ ತಂಡವು ಶವವನ್ನು ದಡಕ್ಕೆ ಸೇರಿಸಿತು.

Edited By : Ashok M
PublicNext

PublicNext

20/10/2024 03:09 pm

Cinque Terre

37.46 K

Cinque Terre

0

ಸಂಬಂಧಿತ ಸುದ್ದಿ