ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಸಂಜೀವ ಕಾಣಿಯೂರು ದಾಖಲೆ ಪಡೆದು ಪೊಲೀಸ್ ಇಲಾಖೆ ತನಿಖೆ ನಡೆಸಲಿ - ಪ್ರತಿಭಾ ಕುಳಾಯಿ

ಸುರತ್ಕಲ್: ಅರಣ್ಯಾಧಿಕಾರಿ ಸಂಜೀವ ಪೂಜಾರಿ ರವರು ಬಿಲ್ಲವ ಮಹಿಳೆಯರ ಕುರಿತಾಗಿ ಹೇಳಿದ ವಿಚಾರವಾಗಿ ಇರುವ ದಾಖಲೆಗಳನ್ನು ಪಡೆದು ಪೊಲೀಸ್ ಇಲಾಖೆ ಗಂಭೀರ ತನಿಖೆ ನಡೆಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಒತ್ತಾಯಿಸಿದ್ದಾರೆ.

ಸುರತ್ಕಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 10 ಸಾವಿರ ದಾಖಲೆಯಿದೆ ಎಂದು ಸಂಜೀವ ಕಾಣಿಯೂರು ಹೇಳಿದ್ದಾರೆ.ಅರಣ್ಯ ಕಾಯುವ ಅಧಿಕಾರಿಗೆ ದಾಖಲೆಯಿದ್ದರೆ ಪೊಲೀಸ್ ಇಲಾಖೆಗೆ ಯಾಕೆ ದೊರಕಿಲ್ಲ. ಸಂಜೀವ ಪೂಜಾರಿ ಅವರನ್ನು ವಿಚಾರಿಸಬೇಕು.ದಾಖಲೆ ಪಡೆದು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಂಜೀವ ಕಾಣಿಯೂರು ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತಿದೆ. ಮಹಿಳೆಯರಿಗೆ ಇದರಿಂದ ಮಾನಸಿಕವಾಗಿ ಆಘಾತವಾಗಿದೆ. ಇವರ ಬಗ್ಗೆ ಪೊಲೀಸ್ ದೂರು ದಾಖಲಿಸುತ್ತೇನೆ ಎಂದರು.

ಅವರು ಮಾತನಾಡಿ ಕುಣಿತ ಭಜನೆ ಇಂದು ಭಕ್ತಿ ಪ್ರಧಾನವಾಗಿ ಇರುವ ಬದಲು ಅದ್ದೂರಿಯ ಶೋಭಾ ಯಾತ್ರೆಗೆ ನಡೆಯುತ್ತದೆ. ಹೆಣ್ಣು ಮಕ್ಕಳು ಹಗಲಿರುಳು ಎನ್ನದೆ ಕಾಲಿಗೆ ಚಪ್ಪಲಿಯನ್ನೂ ಹಾಕದೆ ಈಗಿನ ಮಾಲಿನ್ಯದಿಂದ ಕೂಡಿದ ರಸ್ತೆಯುದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ನಡೆಸಲಾಗುತ್ತದೆ. ಈ ಹಿಂದೆ ದೇವಸ್ಥಾನ, ಭಜನಾ ಮಂದಿರಗಳಿಗೆ ಸೀಮಿತವಾಗಿ ನಡೆಯುತ್ತಿದ್ದ ಭಕ್ತಿ ಸಂಕೀರ್ತನೆಗೂ, ಈಗಿನ ಶೋಕಿಯ ರಸ್ತೆಯಲ್ಲಿ ಸೌಂಡ್ ಬಾಕ್ಸ್ ಗಳನ್ನು ಹಾಕಿ ನಡೆಯುವ ಭಕ್ತಿ ಪ್ರಧಾನ ಅಲ್ಲದ ಕುಣಿತ ಭಜನೆಗೂ ತುಂಬಾ ವ್ಯತ್ಯಾಸವಿದೆ. ಇದಕ್ಕೆ ಪ್ರೋತ್ಸಾಹ ಅನಗತ್ಯ.ಇಂತಹ ಕಾರ್ಯಕ್ರಮಗಳಿಗೆ ಕಳಿಸುವ ಹೆತ್ತವರು ಕೂಡ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಎಚ್ಚರಿಕೆ ಕೊಡಬೇಕು ಎಂದು ಮನವಿ ಮಾಡಿದರು.

Edited By : Nagesh Gaonkar
PublicNext

PublicNext

19/10/2024 10:15 pm

Cinque Terre

49.05 K

Cinque Terre

1

ಸಂಬಂಧಿತ ಸುದ್ದಿ