ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಂಡಿಗ ದೇವಿರಮ್ಮ ದೀಪೋತ್ಸವಕ್ಕೆ ಸಕಲ ಸಿದ್ಧತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್

ಚಿಕ್ಕಮಗಳೂರು: ಇದೇ ತಿಂಗಳ 31 ರಿಂದ ನವೆಂಬರ್ 03ರ ವರೆಗೆ ನಡೆಯುವ ಬಿಂಡಿಗ ದೇವಿರಮ್ಮ ದೀಪೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ದೇವಿರಮ್ಮ ದೀಪೋತ್ಸವ ಕಾರ್ಯಕ್ರಮದ ಸಿದ್ದತೆ ಬಗ್ಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಅಕ್ಟೋಬರ್ 30 ರಂದು ರಾತ್ರಿ ಬೆಟ್ಟ ಹತ್ತುವ ಭಕ್ತಾದಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ಸೈನ್ ಬೋರ್ಡ್‌ಗಳ ಮೂಲಕ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಮಳೆ ಇರುವುದರಿಂದ ಜಾಗೂರುಕತೆಯಿಂದ ಭಕ್ತರು ಬೆಟ್ಟ ಏರುವುದು, ಅಗತ್ಯವಿದ್ದರೆ ಸ್ವಯಂ ಸೇವಕರ ಸಹಾಯ ಪಡೆದು ಸುರಕ್ಷತೆಯಿಂದ ಬೆಟ್ಟ ಹತ್ತ ಬೇಕು ಎಂದ ಅವರು. ಬರುವ ಭಕ್ತರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆ ರಕ್ಷಣೆ, ಆರೋಗ್ಯ ಸೇವೆ ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಬರುವ ಭಕ್ತರಿಗೆ ಮೂರು ದಿನಗಳ ಕಾಲ ವ್ಯವಸ್ಥಾಪನಾ ಸಮಿತಿ ಪ್ರಸಾದ, ಕುಡಿಯುವ ನೀರು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ದತೆ ಮಾಡಿಕೊಳ್ಳುವಂತೆ ಹಾಗೂ ಪ್ರತಿ ವರ್ಷದಂತೆ ಈ ಬಾರಿ ಭಕ್ತರು ಹೆಚ್ಚಾಗುವ ಸಾಧ್ಯತೆ ಇದ್ದು, ಜಾತ್ರೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ವ್ಯವಸ್ಥಿತವಾಗಿ ಎಲ್ಲ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

Edited By : PublicNext Desk
Kshetra Samachara

Kshetra Samachara

19/10/2024 07:35 pm

Cinque Terre

4.9 K

Cinque Terre

0

ಸಂಬಂಧಿತ ಸುದ್ದಿ