ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಳೆಗೆ ನೆಲಕ್ಕುರುಳಿದ ಮನೆ - ಅತ್ತೆ, ಸೊಸೆಗೆ ಗಂಭೀರ ಗಾಯ

ನವಲಗುಂದ: ನಿರಂತರವಾಗಿ ಸುರಿದ ಮಳೆಯಿಂದ ಮನೆಯೊಂದು ಕುಸಿದು ಅತ್ತೆ, ಸೊಸೆ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.

ಹನಸಿ ಗ್ರಾಮದ ಬಾಪುಗೌಡ ಬಸನಗೌಡ ಪಾಟೀಲ ಎಂಬುವರ ಮನೆ ಇದಾಗಿದ್ದು, ಮನೆ ಬೀಳುತ್ತಿದ್ದಂತೆಯೇ ಮನೆಯ ಅಡಿಯಲ್ಲಿ ಸಿಲುಕಿದ ಅತ್ತೆ ಮಂಗಳಾ ಪಾಟೀಲ (55) ಹಾಗೂ ಸೊಸೆ ಸುವರ್ಣ ಪಾಟೀಲ (37) ಅವರನ್ನು ಗ್ರಾಮಸ್ಥರೇ ರಕ್ಷಣೆ ಮಾಡಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇನ್ನು ಮಂಗಳಾ ಅವರ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಸುವರ್ಣ ಎಂಬುವರಿಗೆ ತಲೆಗೆ ಪೆಟ್ಟಾಗಿದೆ. ಮಣ್ಣಿನ ಹಳೆಯ ಮನೆಯಾಗಿದ್ದರಿಂದ ನಿರಂತರ ಮಳೆಗೆ ಕುಸಿದಿದೆ. ಪ್ರಾಣಾಪಾಯದಿಂದ ಪಾರಾಗಿರುವ ಅತ್ತೆ-ಸೊಸೆಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿ: ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

18/10/2024 10:33 pm

Cinque Terre

81.41 K

Cinque Terre

1

ಸಂಬಂಧಿತ ಸುದ್ದಿ