ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕಲಿ ಆರ್ಡರ್ ಪ್ಲೇಸ್‌ಮೆಂಟ್ ಮೂಲಕ ಪೋರ್ಟರ್ ಕಂಪನಿಗೆ 90 ಲಕ್ಷ ವಂಚನೆ - ನಾಲ್ವರ ಬಂಧನ

ಬೆಂಗಳೂರು: ನಕಲಿ ಆರ್ಡರ್ ಬುಕ್ ಮಾಡಿ, ಕ್ಯಾನ್ಸಲ್ ಮಾಡುವ ಮೂಲಕ ಆನ್‌ಲೈನ್ ಲಾಜಿಸ್ಟಿಕ್ ಕಂಪನಿಗಳಿಗೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೇಯಸ್ (29), ಕೌಶಿಕ್ (26), ರಂಗನಾಥ್ (26) ಹಾಗೂ ಆನಂದ್ ಕುಮಾರ್ (30) ಬಂಧಿತ ಆರೋಪಿಗಳು.

ಪೋರ್ಟರ್ ಲಾಜಿಸ್ಟಿಕ್ ಅಪ್ಲಿಕೇಷನ್‌ನಲ್ಲಿ ಗ್ರಾಹಕರು ಹಾಗೂ ಚಾಲಕರ ಹೆಸರಿನಲ್ಲಿ ತಾವೇ ನಕಲಿ ಐಡಿಗಳನ್ನು ಸೃಷ್ಟಿಸುತ್ತಿದ್ದ ಆರೋಪಿಗಳು, ದೂರದ ಸ್ಥಳಗಳಿಗೆ ಆರ್ಡರ್ ಪ್ಲೇಸ್ ಮಾಡುವ ಮೂಲಕ ಚಾಲಕನ ವ್ಯಾಲೆಟ್‌ಗೆ ಹಣ ಪಾವತಿಸುತ್ತಿದ್ದರು. ಮತ್ತು ಹಾಗೆ ವ್ಯಾಲೆಟ್‌ಗೆ ಪಾವತಿಸಿದ ಹಣವನ್ನ ತಕ್ಷಣವೇ ಪುನಃ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ನಂತರ Geo Spoofing ವಿಪಿಎನ್ ಬಳಸಿಕೊಂಡು ಲೊಕೇಷನ್ ಬದಲಿಸಿ ಚಾಲಕನ ಐಡಿಯಿಂದ ಆರ್ಡರ್ ಮುಕ್ತಾಯಗೊಂಡಿರುವಂತೆ ಬಿಂಬಿಸುತ್ತಿದ್ದರು. ಮತ್ತೊಂದೆಡೆ ಗ್ರಾಹಕರ ಐಡಿಯಿಂದ ಆರ್ಡರ್ ಕ್ಯಾನ್ಸಲ್ ಆಗಿರುವುದಾಗಿ ಬಿಂಬಿಸಿ ರಿಫಂಡ್ ಸಹ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ ಕಳೆದ 8 ತಿಂಗಳಿಂದ ಒಟ್ಟು 90 ಲಕ್ಷ ನಷ್ಟವಾಗಿರುವುದನ್ನ ಮನಗಂಡ ಪೋರ್ಟರ್ ಕಂಪನಿಯ ಪ್ರತಿನಿಧಿಗಳು ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪೋರ್ಟರ್ ಕಂಪನಿಯೊಂದಿಗೆ ಅಟ್ಯಾಚ್ ಆಗಿರುವ ನಂಬರ್ ಮತ್ತಿತರರ ತಾಂತ್ರಿಕ ಮಾಹಿತಿಯನ್ನು ಆಧರಿಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿತರು ಬೆಂಗಳೂರಿನಲ್ಲಿದ್ದುಕೊಂಡೆ Geo Spoofing ಮುಖಾಂತರ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಹ ಇದೇ ರೀತಿ PORTER ಕಂಪನಿಗೆ ವಂಚಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ ಕೃತ್ಯಕ್ಕೆ ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಬಳಸಿಕೊಂಡಿದ್ದ ಆರೋಪಿಗಳು ವಂಚಿಸಿದ ಹಣವನ್ನ ಮನೆ ನಿರ್ಮಾಣ, ವಿಲಾಸಿ ಜೀವನ ಮತ್ತು ಸಾಲ ತಿರಿಸಿಕೊಳ್ಳಲು ಬಳಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು‌ ಪೊಲೀಸರು ತಿಳಿಸಿದರು.

Edited By : Suman K
PublicNext

PublicNext

18/10/2024 07:51 pm

Cinque Terre

9 K

Cinque Terre

0

ಸಂಬಂಧಿತ ಸುದ್ದಿ