ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಶಾಸಕ ಯತ್ನಾಳ್ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದಾವಣಗೆರೆ: ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯತ್ನಾಳ್ ಗೆ ದಾವಣಗೆರೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಕೆಪಿಸಿಸಿ ಜನರಲ್ ಸೆಕ್ರೆಟರಿ ಮನೋಹರ್ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ವರ್ಗಾವಣೆಗೊಂಡು ಬೆಂಗಳೂರು ಹೈಗ್ರೌಂಡ್ಸ್ ಠಾಣೆಯಿಂದ ಗಾಂಧಿನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.

ಸೆಪ್ಟೆಂಬರ್ 29ರಂದು ದಾವಣಗೆರೆ ಜಿ ಎಂಐಟಿ ಗೆಸ್ಟ್ ಹೌಸ್ ನಲ್ಲಿ ಹೇಳಿಕೆ ಹಿನ್ನೆಲೆ ಕೆಪಿಸಿಸಿ ಜನರಲ್ ಸೆಕ್ರೆಟರಿ ಮನೋಹರ್ ದೂರು ನೀಡಿದ್ದಾರೆ. ಬಿಜೆಪಿ ಪಕ್ಷದ ಕೆಲ ನಾಯಕರು 1000 ಕೋಟಿ ಹಣ ಸಂಗ್ರಹಿಸಿಟ್ಟುಕೊಂಡಿದ್ದು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಹೇಳಿಕೆ ನೀಡಿದ್ರು.

ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ ತಾವು ಸಿಎಂ ಆಗಲು ಸಂಚು ರೂಪಿಸುತ್ತಿದ್ದಾರೆ. 1 ಸಾವಿರ ಕೋಟಿ ಹಣ ಬಳಸಿ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಸರ್ಕಾರ ಪತನಗೊಳಿಸಲು ಯತ್ನ ನಡೆದಿದೆ ಎಂದು ಸಭೆ ನಂತರ ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಯತ್ನಾಳ್ ಪ್ರತಿಕ್ರಿಯೆ ನೀಡಿದ್ರು. .

2024 ಡಿಸಂಬರ್ 24 ರಲ್ಲೇ ರಾಜಕೀಯ ಕ್ರಾಂತಿಯಾಗಲಿದ್ದು ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ಹೇಳಿಕೆಯ ವಿಡಿಯೋ ಆಧರಿಸಿ ದೂರು ದಾಖಲಾಗಿದೆ. ಜನಾದೇಶಕ್ಕೆ ಅಪಪ್ರಚಾರ ಮಾಡಿ, ಭ್ರಷ್ಟ ಅಕ್ರಮ ಹಣ ವರ್ಗಾವಣೆಯಾಗಿರುವ ಶಂಕೆಯಿದೆ. ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ. ಭಾರತೀಯ ನ್ಯಾಯ ಸಂಹಿತೆ 2023 ,192 ಕಲಂ‌ ನ ಅನ್ವಯ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 29ರಂದು ದಾವಣಗೆರೆ ಜಿಎಂಐಟಿಯಲ್ಲಿ ಯತ್ನಾಳ್ ಅಂಡ್ ಟೀಂ ಸಭೆ ಸೇರಿತ್ತು. ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ ಎಂ ಸಿದ್ದೇಶ್ವರ್, ಹರಿಹರ ಶಾಸಕ ಬಿ ಪಿ ಹರೀಶ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದರು. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದು. ಇದನ್ನ ಆಧರಿಸಿ ದೂರು ದಾಖಲಾಗಿದೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/10/2024 12:43 pm

Cinque Terre

32.12 K

Cinque Terre

8

ಸಂಬಂಧಿತ ಸುದ್ದಿ