ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕಾಂಗ್ರೆಸ್‌ನಲ್ಲಿ ಆಂತರಿಕ ಬೆಳವಣಿಗೆ ಬೆನ್ನಲ್ಲೇ - ಸಿಎಂ, ಡಿಕೆಶಿ ಜೊತೆ ಕೆ.ಸಿ ವೇಣುಗೋಪಾಲ್‌ ಮಹತ್ವದ ಸಭೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣ ಎದುರಾದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಬೆಳವಣಿಗೆಗಳು ನಡೆದಿತ್ತು, ಕೆಲವರು ಡಿನ್ನರ್ ಮೀಟಿಂಗ್ ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ ಸಭೆ ಮೇಲೆ ಸಭೆಗಳನ್ನ ನಡೆಸಿದ್ರು.

ಅಲ್ದೇ ಸಿಎಂ ಬದಲಾವಣೆ ಎಂದೆಲ್ಲ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇದರೆ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿಕೆಶಿ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮಹತ್ವದ ಸಭೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳ ಕಾವೇರಿ ನಿವಾಸಿದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಮತ್ತು ವೇಣುಗೋಪಾಲ್ ಮೂರೇ ಜನ ಕ್ಲೋಸ್ಡ್ ಡೋರ್ ಮೀಟಿಂಗ್ ನಡೆಸಿದ್ದಾರೆ.

ಇತ್ತೀಚೆಗೆ ಸಿಎಂ ಗಾದಿಗಾಗಿ ನಡೆದ ದಲಿತರ ಸಚಿವರ ಸಭೆ, ಮುಡಾ ಪ್ರಕರಣ, ಸರ್ಕಾರದ ಆಡಳಿತ ಚರ್ಚೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಮುಖ್ಯಮಂತ್ರಿಗಳ ಬದಲಾವಣೆ ಚರ್ಚೆಗೆ ಸಂಬಂಧಿಸಿದ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತದೆ. ಈ ಸಭೆ ಮೂಲಕ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂಬ ಸಂದೇಶ ಕೊಡುವ ಪ್ಲಾನ್ ಸಿಎಂ ಸಿದ್ದರಾಮಯ್ಯರದ್ದು, ಅಲ್ದೇ ಈ ರೀತಿ ಸಭೆಗಳಿಂದ ಪಕ್ಷಕ್ಕೆ ಹಾನಿಯಾಗಲಿದೆ ಇನ್ಮುಂದೆ ಈ ರೀತಿಯ ಪ್ರತ್ಯೇಕ ಸಭೆಗಳನ್ನ ನಡೆಸದ ರೀತಿ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದ್ರ ಜೊತೆ ಸಿಎಂ ಸಿದ್ದರಾಮಯ್ಯಗೆ ಎದುರಾಗಿರುವ ಮುಡಾ ಪ್ರಕರಣದ ಕಾನೂನು ಹೋರಾಟ ಮತ್ತು ನಡೆಯಬಹುದಾದ ಬೆಳವಣಿಗೆ ಬಗ್ಗೆಯೂ ಚರ್ಚೆ ನಡೆಸಲಾಗುತ್ತೆ.

Edited By : Manjunath H D
PublicNext

PublicNext

16/10/2024 07:35 pm

Cinque Terre

31.13 K

Cinque Terre

1

ಸಂಬಂಧಿತ ಸುದ್ದಿ