ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಸರ್ಕಾರದ ಏಜೆಂಟರ್ ಜೊತೆ ಬಿಷ್ಣೋಯಿ ಗ್ಯಾಂಗ್ ನಂಟು: ರಾಜತಾಂತ್ರಿಕರ ವಜಾ ಬಳಿಕ ಕೆನಡಾ ಸರ್ಕಾರದ ಹೊಸ ಕ್ಯಾತೆ

ನವದೆಹಲಿ: ಭಾರತ ಸರ್ಕಾರದ ಏಜೆಂಟರ್‌ಗಳು ಖಲಿಸ್ತಾನಿ ವಿಚಾರದಲ್ಲಿ ಅಪರಾಧಿಗಳನ್ನು ಬಳಕೆ ಮಾಡುತ್ತಾರೆ. ಪ್ರಮುಖವಾಗಿ ಬಿಷ್ಣೋಯಿ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಕೆನಡಾ ಹೇಳಿದೆ ಎಂದು ವರದಿಯಾಗಿದೆ.

ಹೌದು. ಭಾರತ - ಕೆನಡಾ ನಡುವೆ ರಾಜಾತಾಂತ್ರಿಕ ಸಂಬಂಧ ಕಳಚಿಕೊಂಡಿದೆ. ಕೆನಡಾದ ಆರೋಪಕ್ಕೆ ಸಿಟ್ಟಿಗೆದ್ದ ಭಾರತ ತನ್ನ ದೇಶದಲ್ಲಿರುವ ಕೆನಡಾ ರಾಜತಾಂತ್ರಿಕ ಸಿಬ್ಬಂದಿಯನ್ನ ವಾಪಸ್ ತೆರಳುವಂತೆ ಸೂಚಿಸಿದೆ. ಬಳಿಕ ಕೆನಡಾ ಸಹ ಅದೇ ರೀತಿ ಮಾಡಿದೆ. ಅಷ್ಟಕ್ಕೆ ಸುಮ್ಮನಾಗದೆ ಈಗ ಭಾರತದ ವಿರುದ್ಧ ಈ ಆರೋಪ ಮಾಡಿದೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿದೆ. ಅದರ ಬೆನ್ನಲ್ಲೇ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹಿಂದೆ ಆರೋಪಿಸಿದ ನಂತರ, ಭಾರತ ಮತ್ತು ಕೆನಡಾ ನಡುವಿನ ಸಂಬಂಧ ತೀವ್ರ ಬಿಗಡಾಯಿಸಿತ್ತು.

‘ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯ ಖಾತರಿಯನ್ನು ಈಗಿನ ಕೆನಡಾ ಸರ್ಕಾರ ನೀಡಬಹುದು ಎಂಬ ನಂಬಿಕೆಯಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ. ‘ಆದ್ದರಿಂದ, ಹೈಕಮಿಷನರ್ ಮತ್ತು ಕೆನಡಾ ಗುರಿಯಾಗಿಸಿಕೊಂಡಿರುವ ಇತರ ರಾಜತಾಂತ್ರಿಕ ಅಧಿಕಾರಿ ಗಳನ್ನು ವಾಪಸ್‌ ಕರೆಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಹೇಳಿದೆ.

Edited By : Vijay Kumar
PublicNext

PublicNext

15/10/2024 09:59 pm

Cinque Terre

74.48 K

Cinque Terre

6

ಸಂಬಂಧಿತ ಸುದ್ದಿ