ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಲ್ ಭುಲೈಯಾ 3 ದೀಪಾವಳಿಯಂದು ರಿಲೀಸ್‌, ಮಾಧುರಿ,ವಿದ್ಯಾರಲ್ಲಿ ಮಂಜುಲಿಕಾ ದೆವ್ವ ಯಾರು?

ಅನೀಸ್ ಬಾಜ್ಮಿ ನಿರ್ದೆಶನದ ಭೂಲ್ ಭುಲೈಯಾ 3 ದೀಪಾವಳಿಯಂದು ರಿಲೀಸ್‌ ಆಗಲಿದ್ದು, ಸಿನಿಮಾ ಟೈಟಲ್‌ ಟ್ರ್ಯಾಕ್‌ ಇಂದು ರಿಲೀಸ್‌ ಮಾಡಲಾಗಿದೆ. ಸಿನಿಮಾದ ಟ್ರೇಲರ್‌, ಮಾಧುರಿ ದೀಕ್ಷಿತ್‌ ಹಾಗೂ ವಿದ್ಯಾ ಬಾಲನ್‌ ಸಮ್ಮಿಲನ ಸಿನಿಮಾದ ಮೇಲಿನ ಎಕ್ಸ್‌ ಪೆಕ್ಟೇಶನ್‌ ಮತ್ತಷ್ಟು ಹೆಚ್ಚಿಸಿದೆ. BB3 ಯ 3-ನಿಮಿಷದ 50-ಸೆಕೆಂಡ್ ಟ್ರೇಲರ್ ವೀಕ್ಷಕರಿಗೆ ಮನರಂಜನೆಯ ಒಂದು ಇಣುಕುನೋಟವನ್ನು ನೀಡುತ್ತದೆ.ಹಾಸ್ಯ, ಸಸ್ಪೆನ್ಸ್ ಥ್ರಿಲ್ಲರ್‌,ಹಾರಾರ್‌ ಎಲ್ಲದರ ಮಿಕ್ಸ್‌ ಈ ಸಿನಿಮಾ. ಕಾರ್ತಿಕ್ ಆರ್ಯನ್ ಸಿನಿಮಾದ ಹೀರೋ ಆಗಿದ್ದು ರೂಹ್ ಬಾಬಾ ನಾಗಿ ಮಂಜುಲಿಕಾಗಳೊಂದಿಗೆ( ದೆವ್ವದ ಹೆಸರು) ಭೇಟಿಯಾಗಲು ತಯಾರಿ ನಡೆಸುತ್ತಿರುತ್ತಾನೆ.ಈ ಸಿನಿಮಾಕ್ಕೆ ಟ್ರಿಪ್ಟಿ ಡಿಮ್ರಿ ಹೊಸ ಸೇರ್ಪಡೆಯಾಗಿದೆ.ಅಫ್‌ ಕೋರ್ಸ್‌ ಟ್ರಿಪ್ಟಿ ಇದ್ದಲ್ಲಿ ಒಂದಷ್ಟು ಹಾಟ್‌ ಸೀನ್‌ ಇರಲೇ ಬೇಕಲ್ವಾ? ಟ್ರೈಲರ್‌ ನಲ್ಲೂ ಅದು ಗೋಚರಿಸುತ್ತದೆ.ಇನ್ನೂ ಟ್ರೈಲರ್‌ ನಲ್ಲಿ ರಾಜ್‌ಪಾಲ್ ಯಾದವ್, ಸಂಜಯ್ ಮಿಶ್ರಾ, ಅಶ್ವಿನಿ ಕಲ್ಸೇಕರ್ ಮತ್ತು ವಿಜಯ್ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನವೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Edited By : Suman K
PublicNext

PublicNext

15/10/2024 07:41 pm

Cinque Terre

24.09 K

Cinque Terre

0