ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹುಲಿ ವೇಷದ ಕೊರಳಿಗೆ ಬೀಳುತ್ತೆ ಸಾವಿರಾರು ರೂ. ಮೌಲ್ಯದ ನೋಟಿನ ಮಾಲೆ- ಈ ಬಾರಿ ಸೌದಿ ಕರೆನ್ಸಿ ಮಾಲೆಯ ವಿಶೇಷ

ಮಂಗಳೂರು: ನಗರದಲ್ಲಿ ದಸರಾ ಸಂಭ್ರಮಕ್ಕೆ ವಿವಿಧ ಹುಲಿವೇಷದ ತಂಡಗಳು ರಸ್ತೆಗಿಳಿದಿದೆ. ಹುಲಿ ವೇಷಧಾರಿಗಳಿಗೆ ನೋಟುಗಳ ಮಾಲೆ ಹಾಕೋದು ತಂಡದ ಗೌರವದ ಸಂಕೇತವಾಗಿದೆ. ಅದರಲ್ಲೂ ದಸರಾ ಟ್ಯಾಬ್ಲೋಗಳಲ್ಲಿ ಹುಲಿಯ ಕೊರಳಿನಲ್ಲಿರುವ ನೋಟಿನ ಮಾಲೆಯೇ ಆ ತಂಡದ ಪ್ರತಿಷ್ಠೆಯ ವಿಚಾರವಾಗಿದೆ.

ಈ ನೋಟುಗಳು ಮಾಲೆಯನ್ನು ಉಳ್ಳಾಲ ಅರಸುಹಿತ್ಲು ನಿವಾಸಿ ರಕ್ಷಿತ್ ಎಂಬವರು ತಯಾರಿಸುತ್ತಾರೆ. ಕರಾವಳಿಯ 60ಕ್ಕೂ ಅಧಿಕ ಹುಲಿವೇಷ ತಂಡಗಳಿಗೆ ರಕ್ಷಿತ್ ನೋಟಿನ ಮಾಲೆ ತಯಾರಿಸಿ ಕೊಡುತ್ತಾರೆ. ಲಕ್ಷ ರೂ. ಮೌಲ್ಯ ಹೊಂದಿರುವ ನೋಟಿನ ಮಾಲೆಯನ್ನು ಇವರು ತಯಾರಿಸಿ ಕೊಟ್ಟಿದ್ದಾರೆ. ಈ ಬಾರಿ ವಿಶೇಷವಾಗಿ ಸೌದಿಯ ಕರೆನ್ಸಿಯ ನೋಟುಗಳಿಂದ ಮಾಲೆಯನ್ನು ತಯಾರಿಸಿದ್ದಾರೆ. ಭಾರತೀಯ ಮೌಲ್ಯದ ಪ್ರಕಾರ ಇದು 25,000 ರೂ. ಮೌಲ್ಯದ್ದಾಗಿದೆ. ಎಮ್ಮೆಕೆರೆ ಫ್ರೆಂಡ್ಸ್‌ನ ತಂಡದ ಹುಲಿವೇಷಧಾರಿಗೆ ಪ್ರೋತ್ಸಾಹಕರೊಬ್ಬರು ಈ ನೋಟಿನ ಮಾಲೆಯನ್ನು ಹಾಕಿದ್ದಾರೆ.

ಕಳೆದ 5 ವರ್ಷಗಳಿಂದ ಇವರು ನೋಟಿನ ಮಾಲೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಹವ್ಯಾಸಕ್ಕಾಗಿ ತೊಡಗಿದ ಇವರ ನೋಟಿನ ಮಾಲೆಗಳಿಗೆ ಸದ್ಯ ಬಹಳಷ್ಟು ಬೇಡಿಕೆಯಿದೆ. ಹೊಸ ಗರಿಗರಿ ನೋಟುಗಳಿಗಾಗಿ ರಕ್ಷಿತ್ ಸ್ಥಳೀಯ ಬ್ಯಾಂಕ್‌ಗಳನ್ನು ಅವಲಂಬಿಸಿದ್ದಾರೆ. ಕೆಲವರು ರಕ್ಷಿತ್ ಅಕೌಂಟ್‌ಗೆ ನೇರವಾಗಿ ಹಣವನ್ನು ಹಾಕುತ್ತಾರೆ. ಈ ಹಣವನ್ನು ಡ್ರಾ ಮಾಡಿ ನೋಟಿನ ಮಾಲೆ ಪೋಣಿಸುತ್ತಾರೆ.

ಚಾರ್ಟ್ ಪೇಪರ್‌ನಲ್ಲಿ ರಟ್ಟಿನ ತುಂಡು ಅಂಟಿಸಿ ನೋಟುಗಳನ್ನು ಹಾನಿಯಾಗದಂತೆ ಜೋಡಿಸಿ ಮಾಲೆಯ ರೂಪ ನೀಡುತ್ತಾರೆ. ಮೌಲ್ಯಕ್ಕೆ ತಕ್ಕಂತೆ ನೋಟಿನ ಆಕಾರ, ಗಾತ್ರ ಬದಲಾಗುತ್ತದೆ. ನವರಾತ್ರಿಯ 3 ತಿಂಗಳು ಮೊದಲೇ ಮಾಲೆ ತಯಾರಿಗೆ ಶುರು ಮಾಡಲಾಗುತ್ತದೆ. ಒಟ್ಟಿನಲ್ಲಿ ದಸರಾ ಸಂಭ್ರಮಕ್ಕೆ ಹುಲಿ ವೇಷ ಮೆರಗು ತಂದರೆ, ಹುಲಿ ವೇಷಕ್ಕೆ ರಕ್ಷಿತ್ ಕೈ ಚಳಕದ ನೋಟಿನ ಮಾಲೆ ಗೌರವ ತರುತ್ತದೆ.

Edited By : Ashok M
PublicNext

PublicNext

13/10/2024 04:59 pm

Cinque Terre

28.97 K

Cinque Terre

0

ಸಂಬಂಧಿತ ಸುದ್ದಿ