ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ ಪಟ್ಟಣದ ಅಂಜುಮನ್ ಶಾದಿ ಹಾಲ ಹತ್ತಿರ ಹರಿದು ಬರುವ ಕೊಳಚೆ ನೀರು

ಶಿಗ್ಗಾವಿ: ಅಂಜುಮನ್ ಶಾದಿ ಹಾಲ್ ಪಕ್ಕದಲ್ಲಿ ರಾಜಕಾಲುವೆ ಗಟಾರ್‌ನಲ್ಲಿ ಕೊಳಚೆ ನೀರು ತುoಬಿ ಗಬ್ಬು ನಾರುತ್ತಿದೆ. ಈ ದುರ್ವಾಸನೆಯಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆ ಆಗುತ್ತಿದೆ.

ಸಂಪೂರ್ಣ ರಸ್ತೆ ಜಲಾವೃತವಾಗಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎಂದು ಶಿಗ್ಗಾಂವಿ ಪಟ್ಟಣದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕರವೇ ತಾಲೂಕು ಅಧ್ಯಕ್ಷ ನ್ಯಾಯವಾದಿ ಸಂತೋಷ್ ಪಾಟೀಲ್ ಮಾತನಾಡಿ ಪಟ್ಟಣದಲ್ಲಿ ಇರುವ ಏಕೈಕ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಜುಮನ್ ಶಾದಿಹಾಲ್‌ನಲ್ಲಿ ಸುಮಾರು ಬಡ ಜನರು ಈ ಶಾದಿ ಹಾಲ್‌ನಲ್ಲಿ ಲಗ್ನ ಮಾಡುತ್ತಾರೆ. ಲಗ್ನಕ್ಕೆ ಬಂದ ಸಾರ್ವಜನಿಕರು ಮೂಗು ಮುಚ್ಚು ಕೊಂಡು ಹೋಗುವ ಪರಿಸ್ಥಿತಿ ಇದೆ. ನಾವು ಹಲವಾರು ಬಾರಿ ಮನವಿ ಮಾಡಿದರೂ ಸಹ ಸಂಬಂಧಪಟ್ಟ ಅಧಿಕಾರಿಗಳಾಗಲಿ ಹಾಗೂ ಪುರಸಭೆ ಅಧಿಕಾರಿಗಳಾಗಲಿ ನಮ್ಮ ಮನವಿಗೆ ಸ್ಪಂದನೆ ನೀಡಿಲ್ಲ.

ಸರ್ವಿಸ್ ರಸ್ತೆ ಕಾರ್ಯಕ್ಕೆ ಸರಕಾರದಿಂದ ಸಾಕಷ್ಟು ಹಣ ಮಂಜೂರು ಆಗಿದ್ದರೂ ಸಹ ಅವುಗಳ ಕಾರ್ಯ ಯಾವುದೇ ಅಭಿವೃದ್ದಿ ಕಾಮಗಾರಿ ಕೈಗೊಳ್ಳದ ಪರಿಸ್ಥಿತಿಯಲ್ಲಿ ಪುರಸಭೆ ಬಂದು ನಿಂತಿದೆ.

ಪಟ್ಟಣದ ಪುರಸಭೆ ಅಧಿಕಾರಿಗಳೂ ಈ ಮುಂದಾಗುವ ಅನಾಹುತಕ್ಕೆ ತಾತ್ಕಲಿಕವಾಗಿ ಪರಿಹಾರ ಕಂಡಕೊಳ್ಳಲು ವಿಫಲವಾದರೆ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಲುವೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಆಗುವ ಸಂಚಾರ ಅವ್ಯವಸ್ಥೆಯಿಂದ ಮುಕ್ತಿಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Edited By : Ashok M
PublicNext

PublicNext

13/10/2024 04:41 pm

Cinque Terre

29.84 K

Cinque Terre

0

ಸಂಬಂಧಿತ ಸುದ್ದಿ