ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 13-10-2024

ಮೇಷ ರಾಶಿ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಗುರಿ ಸಾಧಿಸುವ ಮೂಲಕ ಮನಸ್ಸಿಗೆ ಸಂತೋಷ ಸಿಗುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಉಂಟಾಗಬಹುದು. ಕೆಲಸ, ಕಾರ್ಯಗಳಲ್ಲಿ ಉತ್ಸಾಹ ಇರುತ್ತದೆ.

ವೃಷಭ: ಪ್ರಯಾಣದಿಂದ ಲಾಭವಿದೆ ಆದರೆ ದೂರದ ಪ್ರಯಾಣ ಬೇಡ. ನಿಮ್ಮ ತತ್ವ ಸಿದ್ಧಾಂತಗಳ ವಿಚಾರಕ್ಕೆ ರಾಜಿ ಬೇಡ. ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣಬಹುದು.

ಮಿಥುನ: ವ್ಯಾವಹಾರಿಕವಾಗಿ, ವ್ಯಾಪಾರದಲ್ಲಿ ಹೆಚ್ಚು ಶ್ರಮಪಡಬೇಕಾದ ದಿನ. ಖರ್ಚು ಹೆಚ್ಚಾಗಿ ಕೆಲವು ದುಷ್ಪರಿಣಾಮಗಳು ನಿಮಗಾಗಬಹುದು. ಉತ್ತಮ ಸಂಬಂಧಗಳು ಚೆನ್ನಾಗಿದ್ದರೂ ಬೆಂಬಲ ಸಿಗುವುದು ಕಷ್ಟ ಸಾಧ್ಯ.

ಕಟಕ: ನಿಮಗಿರುವ ಗೌರವ, ಸ್ಥಾನಮಾನ ದುರುಪಯೋಗವಾಗಬಹುದು. ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಕೆ ಆಗಬಹುದು. ಬೆಲೆಬಾಳುವ ಪದಾರ್ಥಗಳು ನಷ್ಟವಾಗಬಹುದು.

ಸಿಂಹ: ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಶುಭ ವಾರ್ತೆಗಳು ಕೇಳಬಹುದು. ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಸಂತೋಷ ಇರುತ್ತದೆ. ಸ್ನೇಹಿತರು, ಬಂಧುಗಳು ದಿನದಿಂದ ದಿನಕ್ಕೆ ವೃದ್ಧಿಯಾಗ್ತಾರೆ.

ಕನ್ಯಾ: ಹೊಸ ಲಾಭಕ್ಕಾಗಿ ಹಣವನ್ನು ಕೂಡಿಡುವ ಬುದ್ಧಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ನಿಮ್ಮ ವಿರೋಧಿಗಳು ನಿಮ್ಮನ್ನು ಹನಿಯಲು ಪ್ರಯತ್ನಿಸುತ್ತಾರೆ. ಗಮನವಿಲ್ಲದ ಕೆಲಸಗಳಿಂದ ಬೇಕಾದಷ್ಟು ತಪ್ಪುಗಳು ನಡೆಯಬಹುದು. ಆಕಾಶ ಮಾರ್ಗದ ಪ್ರಯಾಣಕ್ಕೆ ಅಡ್ಡಿಯಾಗಬಹುದು.

ತುಲಾ: ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ನೌಕರಿ ಬಗ್ಗೆ ಭಯ ಕಾಡಬಹುದು. ಅಜೀರ್ಣ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಬಹುದು. ನಿಮ್ಮ ಕೆಟ್ಟ ಅಭ್ಯಾಸಗಳಿದ್ದರೆ ನಿಧಾನವಾಗಿ ಬಿಡುವುದು ಒಳ್ಳೆಯದು.

ವೃಶ್ಚಿಕ : ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗಲು ಅವಕಾಶ ಕೊಡಬೇಡಿ. ಆಡಳಿತ ವರ್ಗ, ಪ್ರಬಲ ವ್ಯಕ್ತಿಗಳ ಜೊತೆ ಮಾತು ಮನಸ್ಸಿಗೆ ಬೇಸರ ತರಬಹುದು. ಇಂದು ಎಲ್ಲ ಜನರ ಸಹಕಾರ ದೊರೆಯುತ್ತದೆ.

ಧನಸ್ಸು : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೇಳುವ ದಿನ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಯವಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ. ಹಳದಿ ಬಟ್ಟೆಯನ್ನು ಧರಿಸಿ ಪ್ರಯಾಣ ಮಾಡಿ ಶುಭವಿದೆ.

ಮಕರ: ಸ್ನೇಹಿತರು ಸಂಬಂಧಿಕರ ಮಧ್ಯೆ ಮಾತಿನ ಘರ್ಷಣೆ ನಡೆಯಬಹುದು. ರಾಜಕಾರಣಿಗಳಿಗೆ ಹಿನ್ನಡೆಯಾಗುವ ಸೂಚನೆಗಳಿವೆ. ಮಾನಸಿಕ ಉದ್ವೇಗವು ನಿಮ್ಮೆಲ್ಲ ಕೆಲಸಗಳನ್ನು ಹಾಳು ಮಾಡಬಹುದು.

ಕುಂಭ : ರಾಜಕೀಯ ವ್ಯಕ್ತಿಗಳಿಗೆ ಶುಭವಾಗುವ ದಿನವೆಂದು ಹೇಳಬಹುದು. ಈ ರಾಶಿಯ ಶಿಕ್ಷಕರು ಅಪವಾದವನ್ನು ಎದುರಿಸಬೇಕಾದ ದಿನ. ಮನಸ್ಸಿಗೆ ಕಿರಿಕಿರಿಯಾಗಬಹುದು ತಾಳ್ಮೆ ಇರಲಿ. ರಸ್ತೆ ಬದಿಯ ವ್ಯಾಪಾರಿಗಳು ಲಾಭ ಪಡೆಯಲು ಅವಕಾಶವಿದೆ.

ಮೀನ: ಅಂದುಕೊಳ್ಳುವ ಹೊತ್ತಿಗೆ ಸಮಸ್ಯೆ ಉದ್ಭವಿಸಬಹುದು. ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡದ ಸಮಯ. ಶಕ್ತಿ ಮೀರಿ ಕೆಲಸ, ಮಾತಿನ ಸರಮಾಲೆಯಿಂದ ನಂಬಿಕೆ ಹಾಳಾಗಬಹುದು ಎಚ್ಚರವಿರಲಿ. ಮಗುವಿನ ಭವಿಷ್ಯವನ್ನು ಗಮನಿಸಿ.

Edited By : Vijay Kumar
PublicNext

PublicNext

13/10/2024 08:13 am

Cinque Terre

38.21 K

Cinque Terre

0